Advertisement
ಸ್ಟೀವನ್ ಪತ್ನಿ ರಂಜನಿ (24), ಕಿರಣ್‌ಕುಮಾರ್, ಮಹೇಂದ್ರನ್ ಬಂಧಿತರು. ಕಿರಣ್ ಕುಮಾರ್ ಹಾಗೂ ಮಹೇಂದ್ರನ್ ಒಳಸಂಚು ರೂಪಿಸಿ ಮೇ 30ರಂದು ರಾತ್ರಿ ಸ್ವೀವನ್‌ರಾಜ್‌ನನ್ನು ಕೊಲೆಗೈದಿದ್ದರು. ಪತಿ ಸ್ಟೀವನ್ ರಾಜ್ ಕೊಲೆ ಮಾಡಲು ಆರೋಪಿಗಳಿಬ್ಬರಿಗೂ ರಂಜಿತಾ ಕುಮ್ಮಕ್ಕು ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ರಾತ್ರಿ ಮದ್ಯ ಸೇವಿಸಲು ಕರೆದೊಯ್ದಿದ್ದ ಆರೋಪಿಗಳಿಬ್ಬರೂ ಕಂಠಪೂರ್ತಿ ಮದ್ಯ ಕುಡಿಸಿದ್ದರು. ಬಳಿಕ ಮಧ್ಯರಾತ್ರಿ ಸುಮಾರಿಗೆ ಬಾಣಸವಾಡಿಯ 80 ಅಡಿ ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಹಲ್ಲೆಗೈದು ಮೃತದೇಹವನ್ನು ಆಟೋದಲ್ಲಿ ಸಾಗಿಸಿ ಹಿದಾಯತ್ ನಗರದ ನಾಲ್ಕನೇ ಕ್ರಾಸ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು.
ಬುಧವಾರ ತಡರಾತ್ರಿ 4 ಗಂಟೆ ಸುಮಾರಿಗೆ ಅಪರಿಚಿತರು ಪತ್ನಿ ರಂಜಿತಾ ಮನೆಯ ಬಾಗಿಲು ಬಡಿದಿದ್ದಾರೆ. ಕೂಡಲೇ ಅವರು ತೆರೆದಿಲ್ಲ. ಇದಾದ ಕೆಲ ಸಮಯದ ಬಳಿಕ ರಂಜಿತಾ ಹಾಗೂ ಆಕೆಯ ಸಂಬಂಧಿಕರು ಮನೆಯ ಬಾಗಿಲು ತೆರೆದು ಮನೆಯ ಮುಂಭಾಗದ ಕ್ರಾಸ್‌ನಲ್ಲಿದ್ದ ಆಟೋ ಗಮನಿಸಿದಾಗ ಆಟೋದಲ್ಲಿ ಕೊಲೆಯಾಗಿರುವ ಸ್ಟೀವನ್ ರಾಜ್ ಮೃತದೇಹ ಕಂಡು ಬಂದಿದೆ ಎಂದು ಪೊಲೀಸರಿಗೆ ತಿಳಿಸಿದರು. ಆದರೆ, ಪತಿಯ ಕೊಲೆಯ ಬಗ್ಗೆ ರಂಜಿತಾಳಿಗೆ ಮೊದಲೇ ಗೊತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
“ಠಾಣೆಯಲ್ಲಿ ಹೈಡ್ರಾಮ ಬಂಧನ’: ಸ್ವೀವನ್ ರಾಜ್ ಕೊಲೆಯಾದ ಬಳಿಕ ತನಗೆ ಏನೂ ಗೊತ್ತಿಲ್ಲ ಎಂಬಂತೆ ರಂಜಿತಾ ನಟಿಸುತ್ತಿದ್ದಳು. ಪತಿಯ ಮೃತದೇಹ ಕಂಡ ಕೂಡಲೇ ತಲೆಸುತ್ತಿ ಬಿದ್ದಿದ್ದಳು. ಪತಿಯ ಕೊಲೆಯ ಬಗ್ಗೆ ಆಕೆಯೇ ದೂರು ನೀಡಲು ಮುಂದಾಗಿದ್ದಳು. ಆದರೆ, ಆಕೆಯ ಬಗ್ಗೆಯೂ ಅನುಮಾನವಿದ್ದದ್ದರಿಂದ ಸ್ವೀವನ್ ಸಹೋದರನಿಂದ ದೂರು ತೆಗೆದುಕೊಂಡು ತನಿಖೆ ಚುರುಕುಗೊಳಿಸಿದಾಗ ಆರೋಪಿಗಳಾದ ಕಿರಣ್ ಜತೆ ರಂಜಿತಾ ಹಲವು ಬಾರಿ ದೂರವಾಣಿ ಸಂಭಾಷಣೆ ನಡೆಸಿರುವ ಬಗ್ಗೆ ಸುಳಿವು ಸಿಕ್ಕಿತ್ತು.
ಮತ್ತೂಂದೆಡೆ ಕೊಲೆ ನಡೆದ ಮಾರನೇ ದಿನದಿಂದಲೇ ಠಾಣೆಗೆ ಬರಲು ಆರಂಭಿಸಿದ ರಂಜಿತಾ ಆರೋಪಿಗಳು ಯಾರು? ಯಾವಗ ಬಂಧಿಸುತ್ತೀರಿ ಎಂದು ಪದೇ ಪದೆ ಕೇಳಲಾರಂಭಿಸಿದಳು. ಅವಳ ಸ್ವಭಾವದಲ್ಲಿಯೂ ಸಾಕಷ್ಟು ಬದಲಾವಣೆ ಆಗಿದ್ದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತಿ ಸ್ಟೀವನ್ ಕೊಲೆ ರಹಸ್ಯ ಬಾಯ್ಬಿಟ್ಟಳು ಎಂದು ಅಧಿಕಾರಿ ಹೇಳಿದರು.