ಬೆಂಗಳೂರು: ಕುಂದಾಪುರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಯನ್ನು ಸ್ನೇಹಿ ತರೇ ಹತ್ಯೆಗೈದಿರುವ ಘಟನೆ ಜಯ ನಗರದ ಜೆಎಸ್‌ಎಸ್ ಸರ್ಕಲ್ ಬಳಿಯ ಅಪಾರ್ಟ್ ಮೆಂಟ್‌ನಲ್ಲಿ
ಬುಧವಾರ ನಡೆದಿದೆ.
ಕುಂದಾಪುರದ ಕೋಟೇಶ್ವರ ಮೂಲದ ಸುರೇಶ್ ಪೂಜಾರಿ ಆಲಿಯಾಸ್ ಗೋಲ್ಡನ್ ಸುರೇಶ್(41) ಕೊಲೆಯಾದ ಉದ್ಯಮಿ. ಜಯನಗರದ ಜೆಎಸ್‌ಎಸ್ ಸರ್ಕಲ್ ಬಳಿಯ ಅಪಾರ್ಟ್ ಮೆಂಟ್‌ನಲ್ಲಿ ಮಂಗಳವಾರ ರಾತ್ರಿ ಸುರೇಶ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆತನನ್ನು ಸ್ನೇಹಿತರೇ ಕತ್ತು ಕೊಯ್ದು ಪರಾರಿಯಾಗಿದ್ದಾರೆನ್ನಲಾಗಿದೆ.
ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿರುವ ಸುರೇಶ್ ಸಹೋದರಿ ನಿರಂತರವಾಗಿ ಕರೆ ಮಾಡಿದಾಗ ಸುರೇಶ್ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡು ಅವರು ಅಪಾರ್ಟ್‌ಮೆಂಟ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳ ಬಗ್ಗೆ ಪೂರ್ಣ ಮಾಹಿತಿ ಸಿಕ್ಕಿದ್ದು, ಬಂಧನಕ್ಕಾಗಿ ಮೂರು ತಂಡಗಳನ್ನು ರಚಿಸಿದ್ದು ಕಾರ್ಯಾಚರಣೆ ಆರಂಭವಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಕುಂದಾಪುರದ ಸುರೇಶ್ ರಿಯಲ್ ಎಸ್ಟೇಟ್ ವ್ಯವಹಾರದ ಜತೆಗೆ ಬಡ್ಡಿ ವ್ಯಾಪಾರ ಮಾಡುತ್ತಿದ್ದರು. ಈ ನಡುವೆ ಉಡುಪಿಯ ರೌಡಿಶೀಟರ್‌ನೊಬ್ಬನನ್ನು ಹತ್ಯೆಗೈಯಲು ಕೆಲ ವರಿಗೆ ಸುಪಾರಿ ಕೊಟ್ಟಿದ್ದ. ಇದರಿಂದ ಆಕ್ರೋಶಗೊಂಡಿದ್ದ ರೌಡಿಶೀಟರ್, ಸುರೇಶ್ ಕೊಲೆಗೆ ಹಲವು ಬಾರಿ ಯತ್ನಿಸಿದ್ದ. ಇದರಿಂದ ಆತಂಕಕ್ಕೊಳಗಾಗಿದ್ದ ಸುರೇಶ್ ಕುಂದಾಪುರ ತ್ಯಜಿಸಿ ಬೆಂಗಳೂರಿಗೆ ಬಂದು ನೆಲೆಸಿದ್ದ. ಇಲ್ಲಿಯೂ
ತನ್ನ ಬಡ್ಡಿ ವ್ಯವಹಾರ ನಡೆಸಿಕೊಂಡು ಕುಂದಾಪುರದ ವ್ಯಾಪಾರ ವನ್ನು ನೋಡಿಕೊಳ್ಳುತ್ತಿದ್ದ. ಅಲ್ಲದೇ ಈತನ ವಿರುದ್ಧ ಕುಂದಾಪುರ, ಮಣಿಪಾಲ, ಕೋಟಾ ಸೇರಿದಂತೆ ವಿವಿಧ ಠಾಣೆ ಗಳಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ.
2008ರಲ್ಲಿ ಕುಂದಾಪುರ ಇನ್‌ಸ್ಪೆಕ್ಟರ್ ಮೇಲೆಯೇ ಠಾಣೆಗೆ ನುಗ್ಗಿ ಹಲ್ಲೆ ನಡೆಸಿದ್ದ. ಈ ಸಂಬಂಧ ಜೈಲು ಸೇರಿದ್ದ ಸುರೇಶ್, ಜಾಮೀನು ಪಡೆದು ಬಿಡುಗಡೆಯಾಗಿದ್ದ. ಬಳಿಕ ಬೆಂಗಳೂರಿನ ಜಯನಗರದಲ್ಲಿ ಕಳೆದ ಒಂದು ವರ್ಷದಿಂದ ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.