Advertisement

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

12:36 AM Oct 11, 2024 | Team Udayavani |

ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಮೂರು ದಿನ ರಜೆ ಇದ್ದು, ಜನರು ತಮ್ಮ ಊರುಗಳಿಗೆ ಹೋಗುತ್ತಿರುವ ಪರಿಣಾಮ ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಗುರುವಾರ ಜನ ಜಂಗುಳಿಯಿಂದ ಕೂಡಿತ್ತು.

Advertisement

ಮಂಗಳೂರಿನಿಂದ ಬೆಂಗಳೂರು, ಮೈಸೂರು ಸಹಿತ ಉತ್ತರ ಕರ್ನಾಟಕದ ಕಡೆ ತೆರಳುವ ನೂರಾರು ಮಂದಿ ಗುರುವಾರ ಮಧ್ಯಾಹ್ನ ವೇಳೆಯೇ ಬಸ್‌ ನಿಲ್ದಾಣಗಳಿಗೆ ಆಗಮಿಸಿದ್ದು, ಜನಸಂದಣಿ ಹೆಚ್ಚಿತ್ತು. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಸದ್ಯ ರೂಟ್‌ ಬಸ್‌ ವ್ಯವಸ್ಥೆ ಸಂಚರಿಸುತ್ತದೆಯೇ ಹೊರತು ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಿಲ್ಲ. ಪ್ರಯಾಣಿಕರ ಜನಸಂದಣಿಗೆ ಅನುಗುಣವಾಗಿ ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ.

ಮುಂಗಡ ಬುಕ್ಕಿಂಗ್‌
ರಜಾ ಹಿನ್ನೆಲೆಯಲ್ಲಿ ಅ.11 ಆಯುಧ ಪೂಜೆ, ಅ.12ಕ್ಕೆ ವಿಜಯದಶಮಿ, ಅ.13ರಂದು ರವಿವಾರ ಇರುವ ಕಾರಣ ಮಂಗಳೂರಿನಿಂದ ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ಹಲವು ಕಡೆಗಳಲ್ಲಿ ಬಸ್‌ಗಳಿಗೆ ಪ್ರಯಾಣಿಕರು ಮುಂಗಡ ಬುಕ್ಕಿಂಗ್‌ ಮಾಡಿರುವ ಕಾರಣ ಸೀಟು ಲಭ್ಯತೆ ಕಡಿಮೆ ಇತ್ತು. ಇದರಿಂದ ಕೆಲವು ಮಂದಿ ಬಸ್‌ಗಳಲ್ಲಿ ನಿಂತುಕೊಂಡೇ ಸಂಚರಿಸಿದರು.

ಬೆಂಗಳೂರು-ಮೈಸೂರು- ಮಡಿಕೇರಿ-ಮಂಗಳೂರು ಮತ್ತು ಬೆಂಗಳೂರು-ಹಾಸನ-ಮಂಗಳೂರು ಮಾರ್ಗವಾಗಿ ಹೆಚ್ಚುವರಿ 30 ಬಸ್‌ಗಳನ್ನು ನಿಯೋಜಿಸಲಾಗಿದೆ.

ಖಾಸಗಿ ಬಸ್‌ ಬಲು ದುಬಾರಿ
ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿ ನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವವರಿಗೆ ಖಾಸಗಿ ಬಸ್‌ನಲ್ಲಿ ಟಿಕೆಟ್‌ ದರ 3 ಸಾ. ರೂ. ಸನಿಹ ಇದೆ. ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್‌ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಖಾಸಗಿ ಬಸ್‌ ಟಿಕೆಟ್‌ ದರ ಏರಿಸಲಾಗಿತ್ತು. ವಾರಾಂತ್ಯ ರಜೆ ಸಿಕ್ಕಿದ್ದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್‌ ದರ ಹೆಚ್ಚಳಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next