Advertisement

Uppinangady: ಕೆಎಸ್‌ಆರ್‌ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ

01:23 AM Oct 02, 2024 | Team Udayavani |

ಉಪ್ಪಿನಂಗಡಿ: ಕೆಎಸ್‌ಆರ್‌ಟಿಸಿ ಬಸ್ಸುಗಳ ನಡುವೆ ಢಿಕ್ಕಿ ಸಂಭವಿಸಿ ಬಸ್ಸಿನಲ್ಲಿದ್ದ ದಂಪತಿ ಗಾಯಗೊಂಡ ಘಟನೆ ಅ. 1ರಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಅಡ್ಡಹೊಳೆಯಲ್ಲಿ ನಡೆದಿದೆ.

Advertisement

ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ನಡುವೆ ಅಡ್ಡಹೊಳೆ ಪೆಟ್ರೋಲ್‌ ಬಂಕ್‌ನ ಸಮೀಪ ಮುಖಾಮುಖೀ ಢಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಎರಡೂ ವಾಹನಗಳೂ ಜಖಂಗೊಂಡಿವೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಹಾಸನ ಮೂಲದ ದಂಪತಿ ನಾಗೇಂದ್ರ ಪ್ರಸಾದ್‌ (60) ಹಾಗೂ ಭಾರತಿ (54) ಅವರು ಗಾಯಗೊಂಡಿದ್ದು, ಅವರನ್ನು ಶಿರಾಡಿಯ 108 ಆ್ಯಂಬುಲೆನ್ಸ್‌ನಲ್ಲಿ ಸಕಲೇಶಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕರ ನಿರ್ಲಕ್ಷ್ಯ;
ಸ್ಥಳೀಯರ ಆಕ್ರೋಶ
ಎರಡು ವಾರಗಳ ಅವಧಿಯಲ್ಲಿ ಗುಂಡ್ಯ ಪರಿಸರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳ ನಡುವೆ ನಡೆಯುತ್ತಿರುವ 3ನೇ ಅಪಘಾತ ಇದಾಗಿದೆ. ಹೆದ್ದಾರಿಯಲ್ಲಿ ಪದೇಪದೆ ಅಪಘಾತ ನಡೆಯುತ್ತಿರುವುದಕ್ಕೆ ಬಸ್‌ ಚಾಲಕರ ಅತಿವೇಗವೇ ಕಾರಣವಾಗುತ್ತಿದೆ ಎಂದು ಆರೋಪಿಸಿ ಘಟನ ಸ್ಥಳದಲ್ಲಿ ಚಾಲಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next