Advertisement
ಜನ ನಾಯಕ ಕರ್ಪೂರಿ ಠಾಕೂರ್‌ಜಿ ಅವರ ಕೊನೆಯ ಉಸಿರು ಇರುವ ತನಕ, ಅವರ ಸರಳ ಜೀವನಶೈಲಿ ಮತ್ತು ವಿನಮ್ರ ಸ್ವಭಾವವು ಸಾಮಾನ್ಯ ಜನರನ್ನು ಆಳವಾಗಿ ಅನುರಣಿಸಿತು. ಅವರ ಸರಳತೆ ಎತ್ತಿ ತೋರಿಸುವ ಹಲವಾರು ಉಪಾಖ್ಯಾನಗಳಿವೆ. ಬಿಹಾರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಕೀಯ ನಾಯಕರಿಗಾಗಿ ಕಾಲನಿ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಠಾಕೂರ್‌ಜಿ ಯಾವುದೇ ಭೂಮಿ ಅಥವಾ ಹಣ ತೆಗೆದುಕೊಳ್ಳಲಿಲ್ಲ. 1988ರಲ್ಲಿ ನಿಧನರಾದಾಗ ಹಲವಾರು ನಾಯಕರು ಶ್ರದ್ಧಾಂಜಲಿ ಸಲ್ಲಿಸಲು ಅವರ ಗ್ರಾಮಕ್ಕೆ ತೆರಳಿದ್ದರು. ಅವರ ಮನೆಯ ಸ್ಥಿತಿ ಕಂಡು ಆ ನಾಯಕರು ಕಣ್ಣೀರು ಹಾಕಿದ್ದರು – ಇಷ್ಟು ಎತ್ತರಕ್ಕೆ ಏರಿದ ವ್ಯಕ್ತಿಯೊಬ್ಬರು ಇಷ್ಟೊಂದು ಸರಳವಾದ ಮನೆ ಹೊಂದಲು ಸಾಧ್ಯವೇ ಎಂದು!
Related Articles
Advertisement
ಬಹುಶಃ ಜನ ನಾಯಕ ಕರ್ಪೂರಿ ಠಾಕೂರ್‌ಜಿ ಭಾರತಕ್ಕೆ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದೆಂದರೆ, ಹಿಂದುಳಿದ ವರ್ಗಗಳಿಗೆ ಅವರು ಅರ್ಹ ಪ್ರಾತಿನಿಧ್ಯ ಮತ್ತು ಅವಕಾಶಗಳನ್ನು ಒದಗಿಸುವ ಭರವಸೆಗಳನ್ನು ಈಡೇರಿಸಲು ಕೈಗೊಂಡ ಕ್ರಮಗಳು. ಹಿಂದುಳಿದ ವರ್ಗಗಳ ಬಲವರ್ಧನೆಗೆ ಕೈಗೊಂಡ ಈ ಕ್ರಮಗಳಿಗೆ ಅವರ ಪಾತ್ರ ದೊಡ್ಡದು. ಅವರ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾದರೂ ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ಒಬ್ಬರ ಜನ್ಮವು ಒಬ್ಬರ ಹಣೆಬರಹವನ್ನು ನಿಶ್ಚಯಿಸುವುದಿಲ್ಲ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಅವರ ನಾಯಕತ್ವದಲ್ಲಿ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ನೀತಿಗಳನ್ನು ಜಾರಿಗೆ ತರಲಾಯಿತು. ಅವರು ಸಮಾಜದ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೂ, ಅವರು ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡಿದರು.
ಕಳೆದ 10 ವರ್ಷಗಳಲ್ಲಿ, ನಮ್ಮ ಸರ್ಕಾರವು ಪರಿವರ್ತನೀಯ ಸಬಲೀಕರಣದ ಯೋಜನೆಗಳು ಮತ್ತು ನೀತಿಗಳನ್ನು ಜಾರಿಗೆ ತಂದು, ಜನ ನಾಯಕ ಕರ್ಪೂರಿ ಠಾಕೂರ್‌ಜಿ ಅವರ ಹಾದಿಯಲ್ಲಿ ಸಾಗಿದೆ. ನಮ್ಮ ರಾಜಕೀಯದ ದೊಡ್ಡ ದುರಂತವೆಂದರೆ, ಕರ್ಪೂರಿ ಜಿ ಅವರಂತಹ ಕೆಲವು ನಾಯಕರನ್ನು ಹೊರತುಪಡಿಸಿ, ಸಾಮಾಜಿಕ ನ್ಯಾಯದ ಕರೆಯನ್ನು ರಾಜಕೀಯ ಘೋಷಣೆಯಾಗಿ ಸೀಮಿತಗೊಳಿಸಲಾಗಿದೆ. ಕರ್ಪೂರಿ ಜಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ ನಾವು ಅದನ್ನು ಪರಿಣಾಮಕಾರಿ ಆಡಳಿತ ಮಾದರಿಯಾಗಿ ಜಾರಿಗೆ ತಂದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದ ಹಿಡಿತದಿಂದ ಮುಕ್ತಗೊಳಿಸಿದ ಭಾರತದ ಸಾಧನೆಯ ಬಗ್ಗೆ ಜನ ನಾಯಕ ಠಾಕೂರ್‌ಜಿ ಇದ್ದಿದ್ದರೆ ತುಂಬಾ ಹೆಮ್ಮೆಪಡುತ್ತಿದ್ದರು. ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಸುಮಾರು 7 ದಶಕಗಳ ನಂತರ ಮೂಲಭೂತ ಸೌಲಭ್ಯಗಳನ್ನು ನಿರಾಕರಿಸಿದ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಜನರು ಇವರು. ಅದೇ ಸಮಯದಲ್ಲಿ, ಸಂತೃಪ್ತಿಯ ಕಡೆಗೆ ನಮ್ಮ ಪ್ರಯತ್ನಗಳು- ಪ್ರತಿ ಯೋಜನೆಯು 100% ವ್ಯಾಪ್ತಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ಇಂದು, ಒಬಿಸಿ, ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಜನರು ಮುದ್ರಾ ಸಾಲಗಳಿಂದ ಉದ್ಯಮಿಗಳಾ ಗುತ್ತಿರುವಾಗ, ಇದು ಕರ್ಪೂರಿ ಆರ್ಥಿಕ ಸ್ವಾತಂತ್ರ್ಯದ ದೃಷ್ಟಿಕೋನವನ್ನು ಪೂರೈಸುತ್ತದೆ. ಅಂತೆಯೇ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಮೀಸಲಾತಿಯನ್ನು ವಿಸ್ತರಿಸುವ ಸವಲತ್ತು ನಮ್ಮ ಸರ್ಕಾ ರಕ್ಕೆ ಇತ್ತು. ಕರ್ಪೂರಿ ಜೀ ಅವರು ತೋರಿಸಿದ ಹಾದಿಯಲ್ಲಿ ಕೆಲಸ ಮಾಡುತ್ತಿರುವ ಒಬಿಸಿ ಆಯೋಗವನ್ನು (ಕೆಟ್ಟದಾಗಿ ಕಾಂಗ್ರೆಸ್ ವಿರೋಧಿಸಿತು) ಸ್ಥಾಪಿಸಿದ ಗೌರವವೂ ನಮಗಿದೆ. ನಮ್ಮ ಪ್ರಧಾನ ಮಂತ್ರಿ-ವಿಶ್ವಕರ್ಮ ಯೋಜನೆಯು ಭಾರತದಾದ್ಯಂತ ಒಬಿಸಿ ಸಮುದಾಯಗಳಿಗೆ ಸೇರಿದ ಕೋಟಿಗಟ್ಟಲೆ ಜನರಿಗೆ ಸಮೃದ್ಧಿಯ ಹೊಸ ಮಾರ್ಗಗಳನ್ನು ತರುತ್ತಿದೆ.
ನಾನು ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯಾಗಿ, ನಾನು ಜನ ನಾಯಕ ಕರ್ಪೂರಿ ಠಾಕೂì ಜೀ ಅವರಿಗೆ ತುಂಬಾ ಧನ್ಯವಾದ ಹೇಳಬೇಕು. ದುರದೃಷ್ಟವಶಾತ್ , ನಾವು 64ನೇ ವಯಸ್ಸಿನಲ್ಲಿ ಕರ್ಪೂರಿ ಜಿಯನ್ನು ಕಳೆದುಕೊಂಡೆವು. ನಮಗೆ ಹೆಚ್ಚು ಅಗತ್ಯವಿರುವಾಗ ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೂ, ಅವರು ತಮ್ಮ ಕೆಲಸದಿಂದ ಕೋಟ್ಯಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ನಿಜವಾದ ಜನನಾಯಕರಾಗಿದ್ದರು!
-ನರೇಂದ್ರ ಮೋದಿ ಪ್ರಧಾನ ಮಂತ್ರಿ