ನ್ಯೂಯಾರ್ಕ್: ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಇತ್ತೀಚಿಗೆ ತನ್ನ 10,000 ಉದ್ಯೋಗಿಗಳನ್ನು ಕೈ ಬಿಡುವುದಾಗಿ ಹೇಳಿಕೊಂಡಿದೆ. ಈ ಘೋಷಣೆ ಬಳಿಕ ಕಂಪನಿಯ ಉದ್ಯೋಗಿಗಳ ಜೊತೆ ನಡುವೆ ನಡೆದ ಸಭೆಯಲ್ಲಿ ಫೇಸ್‌ಬುಕ್‌ನ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ಸಿಬ್ಬಂದಿಗಳು ಛೀಮಾರಿ ಹಾಕಿರುವ ಘಟನೆ ನಡೆದಿದೆ.
ಕಳೆದ ನವೆಂಬರ್‌ನಲ್ಲಿ 11,000 ಸಾವಿರ ಉದ್ಯೋಗ ಕಡಿತಗೊಳಿಸಿದ ಬಳಿಕ ಮಾರ್ಚ್ 14ರಂದು ಮತ್ತೆ 10,000 ಉದ್ಯೋಗ ಕಡಿತಗೊಳಿಸುವ ತೀರ್ಮಾನ ಮಾಡಲಾಗಿತ್ತು. ಈ ನಿರ್ಧಾರ ಪ್ರಕಟಗೊಂಡ ಬಳಿಕ ತನ್ನ ಉದ್ಯೋಗಿಗಳ ಸಾಮಾನ್ಯ ಸಭೆ ಕರೆದಾಗ ಅವರು ಮಾರ್ಕ್ ವಿರುದ್ಧ ಕೆಂಡಕಾರಿದ್ದಾರೆ. ಈ ರೀತಿ ಉದ್ಯೋಗ ಕಡಿತ ಮಾಡಿದರೆ ಕಂಪನಿ ಮೇಲೆ ನಂಬಿಕೆಯಿಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಮಾರ್ಕ್ ಝುಕರ್‌ಬರ್ಗ್ ನಿರ್ಧಾರದಿಂದಾಗಿ ಕೋಪಗೊಂಡಿರುವ ಉದ್ಯೋಗಿಗಳು, ʻಹೊಸ ಉದ್ಯೋಗಗಳು ಯಾವ ನಂಬಿಕೆಯಿಂದ ಕಂಪೆನಿ ಸೇರುತ್ತಾರೆ.? ಇಂತಹಾ ನಿರ್ಧಾರಗಳು ಕಂಪನಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಉದ್ಯೋಗಿಗಳ ಭವಿಷ್ಯವನ್ನೂ ಹಾಳುಗೆಡವುತ್ತದೆʼ ಎಂದು ಎಚ್ಚರಿಸಿದ್ದಾರೆ.