Advertisement
ಕಾಲೇಜುಗಳಲ್ಲಿ ರೋವರ್-ರೇಂಜರ್ ಘಟಕ ಇನ್ನೂ ಆರಂಭವಾಗದೇ ಇದ್ದಲ್ಲಿ, ಪ್ರಾಧ್ಯಾಪಕರನ್ನು ಇದಕ್ಕಾಗಿ ಆಯ್ಕೆ ಮಾಡಿ, ತರಬೇತಿಗೆ ನಿಯೋಜಿಸಲು ಮತ್ತು ಇದೇ ತಿಂಗಳಲ್ಲಿ ನಡೆಯಲಿರುವ ಆನ್‌ಲೈನ್ ಬಿಗಿನರ್ ಕೋರ್ಸ್‌ಗೆ ನಿಯೋಜಿಸಿ, ತರಬೇತಿ ಪಡೆಯಲು ಸೂಚಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರಿಗೆ ನಿರ್ದೇಶಿಸಲಾಗಿದೆ.
ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಸಂದರ್ಭ ಪ್ರತಿ ವರ್ಷ ವಿದ್ಯಾರ್ಥಿಗಳಿಂದ ರೋವರ್ ಮತ್ತು ರೇಂಜರ್ ಘಟಕಕ್ಕೆ ಸಂಗ್ರಹಿಸಲಾಗುವ ಶುಲ್ಕವನ್ನು ಮಾರ್ಗಸೂಚಿ ಅನ್ವಯ ಬಳಸಿಕೊಳ್ಳಬೇಕು. 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ಒಳಗೊಂಡಂತೆ ಹಿಂದಿನ ವರ್ಷಗಳ ಬಾಕಿ ಉಳಿದಿರುವ ಮೊತ್ತವನ್ನು ರೋವರ್ ಮತ್ತು ರೇಂಜರ್ ಘಟಕದ ಚಟುವಟಿಕೆಗೆ ಪೂರಕವಾಗುವಂತೆ ಸ್ಯಾನಿಟೈಸರ್, ಮಾಸ್ಕ್ ಮೊದಲಾದ ವಸ್ತುಗಳನ್ನು ಖರೀದಿಸಿ, ಕಾಲೇಜು ಆರಂಭದ ಅನಂತರ ವಿದ್ಯಾರ್ಥಿಗಳಿಗೆ ವಿತರಿಸಲು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.