Advertisement
ಹದಿನೈದು ದಿನಗಳ ಹಿಂದೆ ಅಂತಾ ರಾಜ್ಯ ಓಡಾಟಕ್ಕೆ ಅವ ಕಾಶ ನೀಡಿದ ಅನಂತರ ರಾಜ್ಯ ದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾ ಗಿರುವು ದನ್ನು ಕೊನೆಗೂ ಮನಗಂಡಿರುವ ರಾಜ್ಯ ಸರಕಾರವು ಈಗ ಐದು ರಾಜ್ಯಗಳ ಮಾರ್ಗಗಳಿಗೆ ನಿರ್ಬಂಧ ಹೇರಿದೆ.
Related Articles
Advertisement
ಮುಂದಿನ 10-15 ದಿನ ಈ ವ್ಯವಸ್ಥೆ ಜಾರಿಯಲ್ಲಿರ ಬಹುದು. ಜತೆಗೆ ಗಡಿ ಭಾಗಗಳಲ್ಲಿ ಕಾಲ್ನಡಿಗೆ ಮೂಲಕ ಸಾವಿರಾರು ಜನರು ಗಡಿ ದಾಟುತ್ತಿದ್ದು, ಅವರ ಮೇಲೂ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕೇಂದ್ರದ ನಿರ್ಧಾರಕ್ಕೆ ಬದ್ಧಮೇ 31ರ ಬಳಿಕದ ಲಾಕ್‌ಡೌನ್ ಕುರಿತು ಕೇಂದ್ರದ ಮಾರ್ಗಸೂಚಿ ಗಮನಿಸಿ ಮುಂದುವರಿಯಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಜೂ. 1ರಿಂದ ಹಲವು ಷರತ್ತುಗಳೊಂದಿಗೆ ದೇವಾಲಯ, ಮಸೀದಿ, ಚರ್ಚ್ ತೆರೆಯಲು ಅವಕಾಶ ಕೊಡಬಹುದು. ಆದರೆ ಹೊಟೇಲ್, ಮಾಲ್, ಸಿನೆಮಾ ಮಂದಿರ ಆರಂಭಕ್ಕೆ ಕೇಂದ್ರದ ಅನುಮತಿ ಬೇಕಿದೆ. ಆಯಾ ವಲಯದಿಂದ ಒತ್ತಡ ಇದೆಯಾದರೂ ಕೇಂದ್ರದ ನಿರ್ಧಾರವೇ ಆ ವಿಚಾರದಲ್ಲಿ ಅಂತಿಮ ಎಂದು ಸಿಎಂ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಕಾರ್ಮಿಕರ ವೆಚ್ಚ ಸರಕಾರಗಳೇ ಭರಿಸಲಿ
ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ತಮ್ಮೂರುಗಳಿಗೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರ ಬಸ್ ಅಥವಾ ರೈಲು ಪ್ರಯಾಣದ ವೆಚ್ಚವನ್ನು ರಾಜ್ಯ ಸರಕಾರಗಳೇ ಹಂಚಿಕೊಂಡು ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. 12 ಇಂಡಿಗೋ ಯಾನಿಗಳಿಗೆ ಸೋಂಕು
ಹೊಸದಿಲ್ಲಿ: ಬೆಂಗಳೂರಿನಿಂದ ಕೊಯಮತ್ತೂರಿಗೆ ತೆರಳಿದ್ದ ಆರು ಮಂದಿ, ಬೆಂಗಳೂರಿನಿಂದ ಮಧುರೈಗೆ ಹೋಗಿದ್ದ ಒಬ್ಬರ ಸಹಿತ ನಾಲ್ಕು ಇಂಡಿಗೋ ವಿಮಾನಗಳಲ್ಲಿ ಸಂಚರಿ ಸಿದ್ದ 12 ಪ್ರಯಾಣಿಕರಿಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲಿಂದ ಬರುವಂತಿಲ್ಲ?
ಮಹಾರಾಷ್ಟ್ರ , ತಮಿಳುನಾಡು, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ ಎಷ್ಟು ದಿನ ನಿರ್ಬಂಧ?
10 ರಿಂದ 15 ದಿನ