ಇಂದಿನ ದಿನಗಳಲ್ಲಿ ಜೀನ್ಸ್ ಒಂದು ಫ್ಯಾಷನ್ ದಿರಿಸಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ದಿರಿಸಿದು. ಜೀನ್ಸ್ ಯಾವುದೇ ಬಗೆಯ ಉಡುಪುಗಳಿಗೂ ಒಂದು ರೀತಿಯ ಸ್ಟೈಲಿಶ್ ಲುಕ್‌ನ್ನು ನೀಡುತ್ತದೆ. ಜೀನ್ಸ್ ಬಟ್ಟೆಯೇ ಬೇರೆಯಾಗಿದ್ದು ಇದನ್ನು ತೊಳೆಯಲು ಕೆಲವೊಂದು ರೀತಿಗಳನ್ನು ಅನುಸರಿಬೇಕಾಗುತ್ತದೆ.
.ಇತರ ಬಟ್ಟೆಗಳಂತೆ ಜೀನ್ಸ್ ಅನ್ನು ಆಗಾಗ ತೊಳೆಯಬೇಡಿ. ವಾರಕ್ಕೊಮ್ಮೆ ತೊಳೆದರೂ ಸಾಕು. ಇದು ತನ್ನ ಕಳೆಯನ್ನು ಕಳೆದುಕೊಳ್ಳುವುದಿಲ್ಲ.
.ಜೀನ್ಸ್‌ನ್ನು ಒಗೆಯುವಾಗ ಒಳ-ಹೊರಗೆ ಮಾಡಿ ಒಗೆಯಿರಿ. ಇದರಿಂದ ನಿಮ್ಮ ಜೀನ್ಸ್ ದೀರ್ಘಕಾಲ ಹಾಳಾಗದಂತೆ ಬಾಳಿಕೆ ಬರುತ್ತದೆ. ಹಾಗೂ ಯಾವಾಗಲೂ ಹೊಸದರಂತೆ ಹೊಳೆಯುತ್ತಿರುತ್ತದೆ.
.ಜೀನ್ಸ್‌ನ್ನು ಒಗೆಯುವಾಗ ಜಿಪ್ ಅನ್ನು ಕ್ಲೋಸ್ ಮಾಡಿ ಮತ್ತು ಬಟನ್‌ಗಳನ್ನು ಮೇಲಕ್ಕೆ ಮಾಡಿಕೊಂಡು ನಂತರ ಒಗೆಯಿರಿ. ಹೀಗೆ ಒಗೆಯುವುದರಿಂದ ಜೀನ್ಸ್ ಆಕಾರ ಕಳೆದುಕೊಳ್ಳುವುದಿಲ್ಲ.
.ಜೀನ್ಸ್‌ನ್ನು ಎಂದಿಗೂ ಬ್ಲೀಚ್ ಮಾಡದಿರಿ. ಬ್ಲೀಚ್‌ನಿಂದ ನಿಮ್ಮ ಜೀನ್ಸ್ ಹಾಳಾಗುವುದರ ಜೊತೆಗೆ ಬಟ್ಟೆಯ ಗುಣಮಟ್ಟ ನಷ್ಟವಾಗಿ ಹಳತರಂತೆ ಕಾಣುತ್ತದೆ.
.ಜೀನ್ಸ್‌ನ್ನು ಅನ್ನು ಎಂದಿಗೂ ಬಿಸಿಲಿನಡಿಯಲ್ಲಿ ಒಣಗಿಸದಿರಿ. ಸೂರ್ಯನ ಕಿರಣಗಳು ಜೀನ್ಸ್ ಬಟ್ಟೆಯನ್ನು ಹಾಳುಮಾಡಿ ಬಿಡುತ್ತದೆ ಮತ್ತು ವೇಗವಾಗಿ ಬಣ್ಣ ಕಳೆದುಕೊಳ್ಳುತ್ತವೆ. ಆದ್ದರಿಂದ ಜೀನ್ ಒಣಗಿಸುವಾಗ ಹೊರಭಾಗವನ್ನು ಒಳಕ್ಕೆ ಮಾಡಿಕೊಂಡು ಒಣಗಿಸಿ.
– ಕೃಷ್ಣಾ