Advertisement

ರೋಟರಿಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ

01:01 PM Jun 28, 2019 | Suhan S |

ಚಾಮರಾಜನಗರ: ನಗರದ ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದು 38 ಮಂದಿ ರಕ್ತದಾನ ಮಾಡಿದರು. ರೋಟರಿ ಭವನದಲ್ಲಿ ಆವರಣದಲ್ಲಿ ರೋಟರಿ ಸಂಗ್ರಹಾಲಯ, ಉಚಿತ ವಸ್ತ್ರ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

Advertisement

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ರಕ್ತದಾನ ಶಿಬಿರಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕ (ಎಸ್ಪಿ) ಆನಂದಕುಮಾರ್‌ ಚಾಲನೆ ನೀಡಿದರು. ರೋಟರಿ ವಸ್ತ್ರ ಸಂಗ್ರಹಾಲಯ , ಉಚಿತ ವಸ್ತ್ರ ವಿತರಣಾ ಕೇಂದ್ರವನ್ನು ರೋಟರಿ ಜಿಲ್ಲಾ ಗವರ್ನರ್‌ ರಂಗನಾಥ ಭಟ್ ಉದ್ಘಾಟಿಸಿದರು.

ರಕ್ತದಾನ ಮಹಾದಾನ: ನಂತರ ಎಸ್ಪಿ ಆನಂದ ಕುಮಾರ್‌ ಮಾತನಾಡಿ, ರಕ್ತದಾನ ಮಹಾದಾನ ವಾಗಿದೆ. ಅಪಘಾತ ಹಾಗೂ ಇತರ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಆ ಸಮಯ ರೋಗಿ ಪಾಲಿಗೆ ಪ್ರತಿ ನಿಮಿ ಷವೂ ಅಮೂಲ್ಯ. ರಕ್ತ ಕೊರತೆ ತಪ್ಪಿಸಿ, ಆತನ ಪ್ರಾಣ ಉಳಿಸಲು ರಕ್ತ ಅತ್ಯವಶ್ಯವಕವಾಗಿರುತ್ತದೆ ಎಂದರು.

ರಕ್ತದಾನ ಮಾಡಿ ಜೀವ ಉಳಿಸಿ: ಪ್ರತಿಯೊಬ್ಬರು ಸಹ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಗಳನ್ನು ಉಳಿಸಲು ಮುಂದಾಗಬೇಕು. ರೋಟರಿ ಸಂಸ್ಥೆಯು ಸೇವಾ ಕಾರ್ಯಗಳ ಮೂಲಕ ಜನಮಾ ನಸದಲ್ಲಿ ಉಳಿದಿದೆ. ಚಾಮರಾಜನಗರ ರೋಟರಿ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸ ತಂದಿದೆ ಎಂದು ಹೇಳಿದರು.

ಒಳ್ಳೆಯ ಬೆಳವಣಿಗೆ: ರೋಟರಿ ಜಿಲ್ಲಾ ಗವರ್ನರ್‌ ಎಂ.ರಂಗನಾಥ್‌ ಮಾತನಾಡಿ, ಸುವರ್ಣ ಮಹೋ ತ್ಸವ ವರ್ಷ ಆಚರಣೆಯ ಅಂಗವಾಗಿ ನೂತನ ಅಧ್ಯಕ್ಷ ಸ್ವಾಮಿ ಮತ್ತು ತಂಡದವರು ರೋಟರಿ ವಸ್ತ್ರ ಸಂಗ್ರಹಾ ಲಯ ಹಾಗೂ ಉಚಿತ ವಸ್ತ್ರ ವಿತರಣಾ ಕೇಂದ್ರ ಆರಂಭಿಸಿರುವುದು ಒಳ್ಳೆಯ ಬೆಳೆವಣಿಗೆ ಎಂದರು.

Advertisement

ರಕ್ತದಾನ ಯಶಸ್ವಿ, ಮೆಚ್ಚುಗೆ: ಬಹಳಷ್ಟು ಮಂದಿ ತಾವು ಧರಿಸಲು ಸಾಧ್ಯವಾಗದ ಒಳ್ಳೆಯ ಬಟ್ಟೆಗಳನ್ನು ಯಾರಿಗೆ ಕೊಡುವುದು ಎಂಬ ಚಿಂತೆಯಲ್ಲಿರುತ್ತಾರೆ. ಅಂಥವರು ರೋಟರಿ ಭವನದ ಕೇಂದ್ರದಲ್ಲಿ ನೀಡಿದರೆ, ಅವಶ್ಯಕತೆ ಇರುವ ಬಡವರಿಗೆ ಅನುಕೂಲ ವಾಗುತ್ತದೆ. ಚಾ.ನಗರ ರೋಟರಿ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳು ನಡೆಯಲಿ. ರಕ್ತದಾನ ಶಿಬಿರ ಬಹಳ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್‌.ಎಂ.ನಂದೀಶ್‌, ಉಪಾಧ್ಯಕ್ಷ ಕೆ.ಎಸ್‌. ಫಾಲಲೊ ೕಚನ ಆರಾಧ್ಯ, ನಿರ್ದೇಶಕ ಸಿದ್ದಲಿಂಗ ಸ್ವಾಮಿ, ಪತ್ರಕರ್ತ ಸೂರ್ಯನಾರಾಯಣ, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಸೇರಿದಂತೆ 38 ಮಂದಿ ರಕ್ತ ದಾನ ಮಾಡಿದರು. ರಕ್ತನಿಧಿ ಕೇಂದ್ರದ ವೈದ್ಯೆ ಡಾ. ಸುಜಾತಾ, ಸಿಬ್ಬಂದಿ ಮುಕುಂದ ಶಿಬಿರ ನಡೆಸಿಕೊಟ್ಟರು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಆರ್‌.ಎಸ್‌. ನಾಗಾರ್ಜುನ್‌, ನೂತನ ಅಧ್ಯಕ್ಷ ಆರ್‌.ಎಂ. ಸ್ವಾಮಿ, ಕಾರ್ಯದರ್ಶಿ ಕೆಂಪನಪುರ ಮಹದೇವ ಸ್ವಾಮಿ, ವಲಯ ಪ್ರತಿನಿಧಿ ದೊಡ್ಡರಾಯಪೇಟೆ ಗಿರೀಶ್‌, ನಿಕಟಪೂರ್ವ ಅಧ್ಯಕ್ಷ ಡಿ.ನಾಗರಾಜು, ಕಾರ್ಯದರ್ಶಿ ಎ. ಶ್ರೀನಿವಾಸನ್‌, ರೊಟೇರಿಯನ್‌ಗಳಾದ ಸಿ.ವಿ. ಶ್ರೀನಿವಾಸಶೆಟ್ಟಿ, ಜಿ.ಆರ್‌.ಆಶ್ವತ್ಥನಾ ರಾಯಣ, ಕಾಳನಹುಂಡಿ ಗುರುಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next