Advertisement

ರಾಸ್‌ ಟೇಲರ್‌ಗೆ ಗೆಲುವಿನ ವಿದಾಯ

11:02 PM Jan 11, 2022 | Team Udayavani |

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡಿನ ಖ್ಯಾತ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಅವರು ತಮ್ಮ ಟೆಸ್ಟ್‌ ಬದುಕನ್ನು ಸ್ಮರಣೀಯ ರೀತಿಯಲ್ಲಿ ಮುಗಿಸಿದರು. ಅವರಿಗೆ ಇನ್ನಿಂಗ್ಸ್‌ ಗೆಲುವಿನ ಉಡುಗೊರೆ ಲಭಿಸಿತು. ಅಂತಿಮ ಎಸೆತದಲ್ಲಿ ವಿಕೆಟ್‌ ಉಡಾಯಿಸಿ ಸ್ವತಃ ಟೇಲರ್‌ ಅವರೇ ಈ ಜಯವನ್ನು ಸಾರಿದ್ದು ಇನ್ನೂ ವಿಶೇಷವಾಗಿತ್ತು.

Advertisement

ಪ್ರವಾಸಿ ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯವನ್ನು ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಹಾಗೂ 117 ರನ್ನುಗಳ ಭಾರೀ ಅಂತರದಿಂದ ಗೆದ್ದಿತು. ಜತೆಗೆ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸಿತು.

395 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾಕ್ಕೆ 3ನೇ ದಿನದಾಟದಲ್ಲಿ ಫಾಲೋಆನ್‌ ಹೇರಲಾಯಿತು. ಲಿಟನ್‌ ದಾಸ್‌ ಅವರ ಶತಕದ ಹೋರಾಟದಿಂದ ತನ್ನ ದ್ವಿತೀಯ ಸರದಿಯನ್ನು 278ರ ತನಕ ಬೆಳೆಸಿ ಶರಣಾಯಿತು. ದಾಸ್‌ 114 ಎಸೆತ ನಿಭಾಯಿಸಿ 102 ರನ್‌ ಹೊಡೆದರು (14 ಬೌಂಡರಿ, 1 ಸಿಕ್ಸರ್‌). ಕಳೆದ ಪಂದ್ಯದ ಬೌಲಿಂಗ್‌ ಹೀರೋ ಇಬಾದತ್‌ ಹೊಸೇನ್‌ ಅವರನ್ನು ನಾಯಕ ಲ್ಯಾಥಂಗೆ ಕ್ಯಾಚ್‌ ಕೊಡಿಸುವ ಮೂಲಕ ಟೇಲರ್‌ ತಮ್ಮ ಟೆಸ್ಟ್‌ ಬದುಕಿನ 3ನೇ ವಿಕೆಟ್‌ ಉರುಳಿಸಿದರು.

ಇದನ್ನೂ ಓದಿ:ಪ್ರೊ ಕಬಡ್ಡಿ 8ನೇ ಆವೃತ್ತಿ: ಅಗ್ರಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್‌

ಟೇಲರ್‌ ನ್ಯೂಜಿಲ್ಯಾಂಡ್‌ ಪರ ಸರ್ವಾಧಿಕ 112 ಟೆಸ್ಟ್‌ ಆಡಿದ ಡೇನಿಯಲ್‌ ವೆಟರಿ ದಾಖಲೆಯನ್ನು ಸರಿದೂಗಿಸಿದರು. “ವಿನ್‌ ಆ್ಯಂಡ್‌ ವಿಕೆಟ್‌ನಿಂದಾಗಿ ನನ್ನ ಟೆಸ್ಟ್‌ ಬದುಕು ಅಮೋಘ ರೀತಿಯಲ್ಲಿ ಕೊನೆಗೊಂಡಿದೆ’ ಎಂಬುದಾಗಿ ಟೇಲರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next