ಗಂಗಾವತಿ : ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಕನ್ನಡದ ಪ್ರೇಕ್ಷಕರಿಗೆ ಬಹು ದೊಡ್ಡ ಗೌರವವಿದೆ ಎಲ್ಲಾ ಭಾಷೆಗಳ ಚಿತ್ರಗಳನ್ನು ವೀಕ್ಷಣೆ ವಿಮರ್ಶೆ ಮಾಡುವ ಮೂಲಕ ಚಿತ್ರರಂಗವನ್ನು ಬೆಳೆಸುವ ಗುಣ ಕನ್ನಡಿಗರಿಗೆ ಇದೆ ಎಂದು ಪೆಳ್ಳಿ ಸಂದಡಿ 2 ತೆಲುಗು ಸಿನಿಮಾದ ಹೀರೋ ರೋಷನ್ ಶ್ರೀಕಾಂತ್ ಹೇಳಿದರು .
ಅವರು ಸಮೀಪದ ವಡ್ಡರಹಟ್ಟಿ ಕ್ಯಾಂಪ್ ನಿವಾಸಿಗಳಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನಮ್ಮ ತಂದೆ ಶ್ರೀಕಾಂತ್ ಅವರು ಗಂಗಾವತಿಯ ವಡ್ಡರಹಟ್ಟಿ ಬಸಾಪಟ್ಟಣ ದಲ್ಲಿ ಜನಿಸಿ ಬೆಳೆದು ನಂತರ ತೆಲುಗು ಸಿನಿಮಾದಲ್ಲಿ ಹೆಸರು ಮಾಡಲು ಕನ್ನಡಿಗರು ಕಾರಣರಾಗಿದ್ದಾರೆ .ಈಗ ನಾನು ಪೆಳ್ಳಿ ಸಂದಡಿ 2 ತೆಲುಗು ಸಿನಿಮಾದಲ್ಲಿ ಪ್ರಥಮವಾಗಿ ಹೀರೋ ಆಗಿ ನಟನೆ ಮಾಡಿದ್ದು ಆಂಧ್ರಪ್ರದೇಶ ,ತೆಲಂಗಾಣ , ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸಿನಿಮಾ ಭರ್ಜರಿಯಾಗಿ ಓಡುತ್ತಿದೆ .
ಈ ಸಂದರ್ಭದಲ್ಲಿ ಗಂಗಾವತಿಯ ಬಸಾಪಟ್ಟಣ ವಡ್ಡರಹಟ್ಟಿ ಗ್ರಾಮದಲ್ಲಿರುವ ನಮ್ಮ ತಂದೆ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಆಶೀರ್ವಾದ ಪಡೆಯುತ್ತಿರುವುದು ಸಂತೋಷವಾಗಿದೆ .ತೆಲುಗು ಸಿನಿಮಾ ರಂಗದಲ್ಲಿ ಇನ್ನಷ್ಟು ಹೆಸರು ಮಾಡಲು ತಂದೆಯವರ ಆಶೀರ್ವಾದ ಇದೆ ಅವರ ಅಭಿಮಾನಿಗಳ ಆಶೀರ್ವಾದ ಇದೆ ಮುಂದೊಂದು ದಿನ ಕನ್ನಡದಲ್ಲಿಯೂ ಅವಕಾಶ ಸಿಕ್ಕರೆ ನಟನೆ ಮಾಡುವುದಾಗಿ ರೋಶನ್ ಹೇಳಿದರು .
ಇದನ್ನೂ ಓದಿ :ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ
ಈ ಸಂದರ್ಭದಲ್ಲಿ ನಟ ಶ್ರೀಕಾಂತ್ ,ಅಭಿಮಾನಿಗಳಾದ ಸಂಕ್ರಾಂತಿ ವೆಂಕಟೇಶ್ವರರಾವ್ ದುರ್ಗಾ ರಾವ್ ಸೇರಿದಂತೆ ನೂರಾರು ಜನರು ಇದ್ದರು.