Advertisement

ರೋಸ್‌ ವಾಟರ್‌ ಸಿಂಪಲ್‌ ಟಿಪ್ಸ್‌

07:08 PM Nov 05, 2019 | Lakshmi GovindaRaju |

-ಪ್ರತಿ ರಾತ್ರಿ ಮಲಗುವ ಮುನ್ನ ಮುಖ ತೊಳೆದು, ರೋಸ್‌ವಾಟರ್‌ ಹಚ್ಚಿದರೆ ತ್ವಚೆ ಮೃದುವಾಗುತ್ತದೆ.

Advertisement

-ಕಡಲೆಹಿಟ್ಟು 2 ಚಮಚ, ಚಿಟಿಕೆ ಅರಿಶಿನ ಮತ್ತು ರೋಸ್‌ ವಾಟರ್‌ ಬೆರೆಸಿ, ಫೇಸ್‌ಪ್ಯಾಕ್‌ ಹಾಕಿದರೆ ಮುಖದ ಜಿಡ್ಡು, ಕಲೆ ಮಾಯವಾಗುತ್ತದೆ.

-ಸೌತೆಕಾಯಿರಸಕ್ಕೆ 2 ಚಮಚ ರೋಸ್‌ವಾಟರ್‌ ಬೆರೆಸಿ ಮುಖಕ್ಕೆ ಹಚ್ಚಿ, 20 ನಿುಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ, ಚರ್ಮಕ್ಕೆ ಕಾಂತಿ ಸಿಗುವುದು.

-ಒಂದು ಸ್ಪ್ರೆಯರ್‌ಗೆ ರೋಸ್‌ವಾಟರ್‌ ಹಾಕಿ, ಫ್ರಿಡ್ಜ್ನಲ್ಲಿ ಇಟ್ಟುಕೊಳ್ಳಿ. ಬಿಸಿಲಿನಿಂದ ಬಂದಾಗ ಮುಖಕ್ಕೆ ಸ್ಪ್ರೆ ಮಾಡಿಕೊಂಡರೆ, ಸೂರ್ಯನ ಕಿರಣಗಳಿಂದ ಚರ್ಮಕ್ಕಾದ ಹಾನಿಯನ್ನು ತಡೆಯಬಹುದು.

-2 ಚಮಚ ರೋಸ್‌ವಾಟರ್‌ಗೆ 2 ಚಮಚ ಕೊಬ್ಬರಿ ಎಣ್ಣೆ ಸೇರಿಸಿ, ಹತ್ತಿಯಿಂದ ಮುಖಕ್ಕೆ ಉಜ್ಜಿ ಮೇಕಪ್‌ ರಿಮೂವರ್‌ನಂತೆ ಬಳಸಬಹುದು.

Advertisement

-ಮುಲ್ತಾನಿ ಮಿಟ್ಟಿಗೆ ರೋಸ್‌ವಾಟರ್‌ ಹಾಕಿ ಕಲಸಿ, ವಾರಕ್ಕೆರಡು ಬಾರಿ ಫೇಸ್‌ಪ್ಯಾಕ್‌ ಹಾಕಿಕೊಳ್ಳಿ.

-ರೋಸ್‌ವಾಟರ್‌ಗೆ ಲಿಂಬೆರಸ ಬೆರೆಸಿ, ಹತ್ತಿಯಿಂದ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆದರೆ ಮೊಡವೆ ಕಲೆ ಮಾಯವಾಗುವುದು.

* ಶ್ರುತಿ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next