Advertisement

ಗುಲಾಬಿ ನೀಡಿ ಜನರಿಗೆ ಜಾಗೃತಿ

01:40 PM Jun 01, 2019 | Team Udayavani |

ರಾಣಿಬೆನ್ನೂರ: ತಾಲೂಕಿನ ರಾಹುತನಕಟ್ಟಿ ಗ್ರಾಮಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಂ. ಕಾಂಬಳೆ ಅವರು ಬಯಲು ಶೌಚಕ್ಕೆ ತೆರಳುತ್ತಿರುವ ಗ್ರಾಮದ ನಾಗರಿಕರಿಗೆ ಹೂವು ನೀಡಿ ಶೌಚಾಲಯಗಳನ್ನು ಉಪಯೋಗಿಸುವಂತೆ ಮನವಿ ಮಾಡಿ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು.

Advertisement

ಬೆಳಗ್ಗೆ 5-30ರ ವೇಳೆಗೆ ಗ್ರಾಮಕ್ಕೆ ಭೇಟಿ ನೀಡಿದ ಕಾಂಬಳೆ ಅವರು ಬಯಲು ಶೌಚಕ್ಕೆ ತೆರಳುತ್ತಿರುವವರನ್ನು ಕಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮ ಪರಿಸರ ಸ್ವಚ್ಛತೆಗಾಗಿ ಸ್ವಚ್ಛಭಾರತ ಅಭಿಯಾನದಡಿಯಲ್ಲಿ ಪ್ರತಿ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಅವುಗಳನ್ನು ನಿರ್ಲಿಪ್ತಗೊಳಿಸಿದೇ, ಬಳಕೆಯಲ್ಲಿ ತಂದಾಗ ಮಾತ್ರ ಮನೆಯ ಸುತ್ತಮುತ್ತ ಸ್ವಚ್ಛ ಮತ್ತು ಸುಂದರ ಪರಿಸರ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ನಾಗರಿಕರು ಶೌಚಾಲಯಗಳ ಬಳಕೆಗೆ ಮುಂದಾಗಬೇಕೆಂದು ಕರೆ ನೀಡಿದರು.

ತಾಲೂಕಿನಾದ್ಯಂತ ಸ್ವಚ್ಛಭಾರತ ಅಭಿಯಾನದಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಹಣ ಬಿಡುಗಡೆ ಮಾಡಲಾಗುತ್ತಿದೆ. ಬಹತೇಕ ಪ್ರದೇಶಗಳಲ್ಲಿ ಶೇ. 80ಕ್ಕೂ ಹೆಚ್ಚು ಶೌಚಾಯಲಗಳು ನಿರ್ಮಾಣವಾಗಿವೆ. ಆದರೆ ಅದನ್ನು ಸಮಪರ್ಕವಾಗಿ ಬಳಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಸರ್ಕಾರದ ಉದ್ದೇಶಿತ ಯೋಜನೆ ಸಫಲವಾಗಬೇಕಾದರೆ ಕಡ್ಡಾಯವಾಗಿ ಬಯಲು ಮುಕ್ತಕ್ಕೆ ಮುಂದಾಗಬೇಕು ಎಂದರು. ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸನಗೌಡ್ರ ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next