Advertisement

ನಂದಿ ಬೆಟ್ಟಕ್ಕೆ ರೋಪ್‌ ವೇ ವ್ಯವಸ್ಥೆ

06:16 PM Jul 16, 2021 | Team Udayavani |

ಬೆಂಗಳೂರು: ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆರೋಪ್‌ ವೇ ನಿರ್ಮಾಣ ಮಾಡುವ ಕುರಿತು ಸ್ಥಳಪರಿಶೀಲನೆಗೆ ಜು. 23ಕ್ಕೆ ಪ್ರವಾಸೋದ್ಯಮ ಸಚಿವಸಿ.ಪಿ.ಯೋಗೇಶ್ವರ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ ಅವರ ನೇತೃñದಲ್ಲಿ ‌Ì ಬೆಂಗಳೂರಿನ ಕುಮಾರ ಕೃಪ ಅತಿಥಿಗೃಹದಲ್ಲಿ ಪ್ರವಾಸೋದ್ಯಮಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Advertisement

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ, ಪಂಕಜ್‌ಕುಮಾರ್‌ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ್‌,ಅರಣ್ಯ ಮತ್ತು ವಸತಿ ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌, ಕೆಎಸ್‌ಟಿಡಿಸಿವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಶರ್ಮ ಹಾಗೂಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನಂದಿಗಿರಿಧಾಮ ರೋಪ್‌ ವೇಯೋಜನೆಗೆ ತ್ವರಿತವಾಗಿಚಾಲನೆನೀಡಬೇಕು. ಜು. 23ರಂದು ಸ್ಥಳ ಪರಿಶೀಲನೆ ಮಾಡಿಅತೀ ಶೀಘ್ರದಲ್ಲಿ ಟೆಂಡರ್‌ಕರೆದು ಕಾಮಗಾರಿಗೆ ಚಾಲನೆನೀಡಬೇಕು ಎಂದು ಸಚಿವ ಯೋಗೇಶ್ವರ ಅವರುಅಧಿಕಾರಿಗಳಿಗೆ ಹೇಳಿದರು.

ಅರ್ಕಾನ್‌ ಇನ್‌ಫ್ರಾ ಸಂಸ್ಥೆಯವರು ನಂದಿ ಬೆಟ್ಟದರೋಪ್‌ ವೇ ಯೋಜನೆಯ ಪ್ರಾತ್ಯಕ್ಷಿತೆ ಪ್ರದರ್ಶಿಸಿದರು.ರೋಪ್‌ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳಅನುಭವವಿದ್ದು, ದೇಶ ವಿದೇಶ ಹಾಗೂ ನಮ್ಮ ರಾಷ್ಟ್ರದವಿವಿಧ ರಾಜ್ಯಗಳಲ್ಲಿ64 ರೋಪ್‌ ವೇ ಗಳನ್ನು ನಿರ್ಮಾಣಮಾಡಿದ್ದಾರೆ. ರಾಜ್ಯದ ಪ್ರಪ್ರಥಮ ರೋಪ್‌ ವೇ ಯನ್ನು ಪ್ರವಾಸಿಗರಿಗೆ ಒದಗಿಸಲು ಅಗತ್ಯ ಎÇÉಾ ಕ್ರಮಗಳನ್ನುಕೈಗೊಳ್ಳುವಂತೆ ಸಚಿವರು ಸಭೆಯಲ್ಲಿ ಸೂಚಿಸಿದರು.ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸಕೀìಟ್‌ನಿರ್ಮಾಣ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಒರಿಸ್ಸಾದಲ್ಲಿ ಕೋನಾರ್ಕ್‌ ಸೂರ್ಯ ದೇವಾಲಯದಇತಿಹಾಸ ಹೇಳುವ ಒಂದು ವಿನೂತನ ಪರಿಕಲ್ಪನೆಯನ್ನುಪ್ರವಾಸಿಗರಿಗೆ ಒದಗಿಸಿದ್ದಾರೆ.

ಪ್ರವಾಸಿಗರು ಸೂರ್ಯದೇವಾಲಯವನ್ನುದರ್ಶನಮಾಡುವುದಕ್ಕೆಮುಂಚೆಅಲ್ಲಿನಿರ್ಮಾಣ ಮಾಡಿರುವ ಥಿಯೇಟರ್‌ ನಲ್ಲಿ ಸೂರ್ಯದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯದರ್ಶನ ಮಾಡಲಾಗುತ್ತದೆ.ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಇದೇಮಾದರಿಯಲ್ಲಿಬಾಹುಬಲಿಯ ಇತಿಹಾಸವನ್ನು ಹೇಳುವ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ ಅದನ್ನು ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗುವುದು. ನಂತರ ಪ್ರವಾಸಿಗರುಗೋಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.ಇದೇ ವೇಳೆ ಒನ್‌ ಇರಿಸ್‌ ಕಂಪನಿಯವರುಪ್ರವಾಸೋದ್ಯಮ ಮೇಳದ ಪ್ರಾತ್ಯಕ್ಷಿಕೆಯನ್ನುಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next