ಹ್ಯಾಮಿಲ್ಟನ್: ಓಪನರ್ ರೋರಿ ಬರ್ನ್ಸ್ (101) ಮತ್ತು ನಾಯಕ ಜೋ ರೂಟ್ (ಅಜೇಯ 114) ಅವರ ಆಕರ್ಷಕ ಶತಕದ ನೆರವಿನಿಂದ ಹ್ಯಾಮಿಲ್ಟನ್ ಟೆಸ್ಟ್ ಪಂದ್ಯದ 3ನೇ ದಿನ ಇಂಗ್ಲೆಂಡ್ 5 ವಿಕೆಟ್‌ಗೆ 269 ರನ್ ಗಳಿಸಿ ಚೇತರಿಸಿಕೊಂಡಿದೆ.
ನ್ಯೂಜಿಲ್ಯಾಂಡಿನ 375 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ದ್ವಿತೀಯ ದಿನ 2 ವಿಕೆಟಿಗೆ 39ರನ್ ಗಳಿಸಿದ್ದ ಇಂಗ್ಲೆಂಡ್ ಎಚ್ಚರಿ ಕೆಯ ಆಟಕ್ಕೆ ಮುಂದಾಯಿತು. ನಾಟೌಟ್ ಬ್ಯಾಟ್ಸ್ ಮನ್‌ಗಳಿಬ್ಬರೂ ಸೆಂಚುರಿ ಬಾರಿಸಿ ಕಿವೀಸ್ ಮೇಲುಗೈಗೆ ತಡೆಯೊಡ್ಡಿದರು.
ಮೊದಲು ಮೂರಂಕೆಯ ಗಡಿ ಮುಟ್ಟಿದ ರೋರಿ ಬರ್ನ್ಸ್ 209 ಎಸೆತಗಳಿಂದ 101 ರನ್ ಹೊಡೆದು ರನೌಟಾದರು (15 ಬೌಂಡರಿ). ಇದು ಅವರ 2ನೇ ಶತಕ. ತೀವ್ರ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಆಡಿದ ರೂಟ್ 278 ಎಸೆತಗಳಿಂದ 114 ರನ್ ಬಾರಿಸಿ (14 ಬೌಂಡರಿ) ಕಿವೀಸ್‌ಗೆ ಸವಾ ಲಾಗಿ ಉಳಿದಿದ್ದಾರೆ. ಇದು ರೂಟ್ ಹೊಡೆದ 17ನೇ ಸೆಂಚುರಿ. ಇವರಿಬ್ಬರ 3ನೇ ವಿಕೆಟ್ ಜತೆಯಾಟದಲ್ಲಿ 177 ರನ್ ಹರಿದು ಬಂತು.
ಈ ಜೋಡಿ ಬೇರ್ಪಟ್ಟ ಬಳಿಕ ಬೆನ್ ಸ್ಟೋಕ್ಸ್ (26), ಜಾಕ್ ಕ್ರಾಲಿ (1) ವಿಕೆಟ್ ಬೇಗನೇ ಉರುಳಿತು. ರೂಟ್ ಜತೆಗೆ ಓಲಿ ಪೋಪ್ 4 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-375 (ಲ್ಯಾಥಂ 105, ಮಿಚೆಲ್ 73, ವಾಟಿÉಂಗ್ 55, ಟೇಲರ್ 53, ಬ್ರಾಡ್ 73ಕ್ಕೆ 4, ವೋಕ್ಸ್ 83ಕ್ಕೆ 3, ಕರನ್ 63ಕ್ಕೆ 2). ಇಂಗ್ಲೆಂಡ್-5 ವಿಕೆಟಿಗೆ 269 (ರೂಟ್ ಬ್ಯಾಟಿಂಗ್ 114, ಬರ್ನ್ಸ್ 101, ಸ್ಟೋಕ್ಸ್ 26, ಸೌಥಿ 63ಕ್ಕೆ 2).