Advertisement

ರೂಪತಾರಾ ರಾಜ್ಯೋತ್ಸವ ವಿಶೇಷ; ಸಂಗ್ರಹಯೋಗ್ಯ ಸಂಚಿಕೆ

12:19 PM Nov 02, 2017 | Sharanya Alva |

ಕನ್ನಡ ಚಿತ್ರಗಳ ವಿಷಯ ಬಂದರೆ, ಕೇಳಿ ಬರುವುದೆಲ್ಲಾ ನಕಾರಾತ್ಮಕ ವಿಷಯಗಳು ಇಲ್ಲ ಸಮಸ್ಯೆಗಳೇ ಜಾಸ್ತಿ ಎನ್ನುವಂತಾಗಿದೆ. ಗುಣಮಟ್ಟದ ಸಮಸ್ಯೆ, ಮಲ್ಟಿಪ್ಲೆಕ್ಸ್‌ ಸಮಸ್ಯೆ, ಚಿತ್ರಮಂದಿರಗಳ ಅಭಾವ, ತೆರಿಗೆ, ಪರಭಾಷಾ ವ್ಯಾಮೋಹ … ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಈ
ಸಮಸ್ಯೆಗಳು ಒಂದು ಕಡೆಯಾದರೆ, ಕನ್ನಡ ಚಿತ್ರಗಳ ಕುರಿತಾದ ಉದಾಸೀನ ಇನ್ನೊಂದು ಕಡೆ. ಇವೆಲ್ಲದರಿಂದ ಕನ್ನಡ ಚಿತ್ರರಂಗಕ್ಕೆ ಒಂದು ರೀತಿ ಕಾರ್ಮೋಡ ಕವಿದಂತಾಗಿದೆ.

Advertisement

ಆದರೆ, ಕನ್ನಡ ಚಿತ್ರರಂಗವೆಂದರೆ ಬರೀ ಸಮಸ್ಯೆಗಳ ಆಗರವಷ್ಟೇ ಅಲ್ಲ. ಇಲ್ಲಿ ಹಲವು ಅತ್ಯುತ್ತಮ ಚಿತ್ರಗಳು ಬಂದಿವೆ, ಅನೇಕ ಸಾಧನೆಗಳಾಗಿವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆ ಮತ್ತು ಹೆಗ್ಗಳಿಕೆಗಳಿವೆ. ಈ ತಿಂಗಳ “ರೂಪತಾರಾ’ದಲ್ಲಿ
ಆದೆಲ್ಲದರ ಬಗ್ಗೆ ಬೆಳಕು ಚೆಲ್ಲಲಾಗಿವೆ. ಅದಕ್ಕೆ ಕಾರಣ, ಇದು ರಾಜ್ಯೋತ್ಸವದ ತಿಂಗಳು. ಈ ತಿಂಗಳು ನಾಡಿನಾದ್ಯಂತ ಕನ್ನಡ ನಾಡು,ನುಡಿಯ ಬಗ್ಗೆ ಹೇಗೆ ಸಂಭ್ರಮಿಸಲಾಗುತ್ತದೋ, ಅದೇ ರೀತಿ ಸಿನಿಮಾಸಕ್ತರು ಸಹ ಇಡೀ ತಿಂಗಳು ರಾಜ್ಯೋತ್ಸವವನ್ನು “ರೂಪತಾರಾ’ ಸಂಚಿಕೆಯೊಂದಿಗೆ ಆಚರಿಸಿ ಸಂಭ್ರಮಿಸಲಿ ಎಂಬ ಕಾರಣಕ್ಕೆ ಸಂಚಿಕೆಯ ಅರ್ಧ ಭಾಗದಷ್ಟು ವಿಶೇಷ ಪುಟಗಳಿಗಾಗಿ ಮೀಸಲಿಡಲಾಗಿದೆ.

ಈ ಬಾರಿಯ “ರೂಪತಾರಾ’ದಲ್ಲಿ ಕನ್ನಡ ಚಿತ್ರಗಳಲ್ಲಿ ಕರ್ನಾಟಕ ನಾಡು, ನುಡಿ, ವೈಶಿಷ್ಟಗಳ ಬಗ್ಗೆ ವಿವರವಾಗಿ ಬರೆಯಾಗಿರುವುದಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೆ ಸಾಹಿತ್ಯ ಕ್ಷೇತ್ರದ ಕೊಡುಗೆ, ಕನ್ನಡ ಚಿತ್ರಗಳಾದ ಕಾದಂಬರಿಗಳ ವಿವರ, ಕನ್ನಡದ ಅದ್ಭುತ ಕವನಗಳು ಹಾಡಾದ ಬಗ್ಗೆ …
ಹೀಗೆ ಹಲವು ಅಪರೂಪದ ಲೇಖನಗಳಿವೆ. ಅದರ ಜೊತೆಗೆ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಹಲವು ಜನಪ್ರಿಯ ಚಿತ್ರಗೀತೆಗಳ ಸಾಹಿತ್ಯವನ್ನು ಇಲ್ಲಿ ನೀಡಲಾಗಿದೆ.

ಒಟ್ಟಾರೆ ಕನ್ನಡ ಚಿತ್ರರಂಗ ನಡೆದು ಬಂದ ಸುಧೀರ್ಘ‌ ಹಾದಿಯ ಹಲವು ಮಜಲುಗಳನ್ನು ಈ ಬಾರಿಯ ಸಂಚಿಕೆಯಲ್ಲಿ ಸೆರೆಹಿಡಿಯುವ ಪ್ರಯತ್ನವನ್ನು ಮಾಡಲಾಗಿದೆ. ಆ ನಿಟ್ಟಿನಲ್ಲಿ ಇದೊಂದು ಅಪರೂಪ ವಷ್ಟೇ ಅಲ್ಲ, ಸಂಗ್ರಹಯೋಗ್ಯ ಸಂಚಿಕೆ ಎಂದರೆ ತಪ್ಪಿಲ್ಲ. ಇಂಥದ್ದೊಂದು ಸಂಚಿಕೆ ನಿಮ್ಮ ಮನೆ ಮತ್ತು ಮನದಲ್ಲಿ ಸದಾ ಇರಲಿ …

Advertisement

Udayavani is now on Telegram. Click here to join our channel and stay updated with the latest news.

Next