Advertisement

ಕಣ್ಣೆತ್ತಿ ನೋಡಿದವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ : ರೂಪಾಲಿ ನಾಯ್ಕ

07:22 PM Feb 28, 2022 | Team Udayavani |

ಅಂಕೋಲಾ : ನಮ್ಮವರನ್ನು ಕಣ್ಣೆತ್ತಿ ನೋಡಿದರೆ ಅವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ ಎಂದು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯನ್ನು ಖಂಡಿಸಿ ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಹೇಳಿಕೆ ನೀಡಿದ್ದಾರೆ.

Advertisement

ಅವರು ಅಂಕೋಲದಲ್ಲಿ ನಡೆದ ಶಿವಾಜಿ ಜನ್ಮಶತಮಾನೋತ್ಸವ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ. ಇನ್ನು ಮುಂದಿನ ದಿನದಲ್ಲಿ ನಾವು ಒಗ್ಗಟ್ಟಾಗಿ ಇಂತಹ ಕೃತ್ಯವನ್ನು ಮರುಕಳಿಸದ ಹಾಗೆ ನೋಡಬೇಕು. ಒಂದು ವೇಳೆ ನಮ್ಮವರನ್ನು ಕಣ್ಣೆತ್ತಿ ನೋಡಿದರೆ ಅವರ ಕಣ್ಣುಗಳನ್ನು ಕೀಳುವ ಕೆಲಸ ಮಾಡಬೇಕಾಗಿದೆ, ನಮ್ಮ ಹುಡುಗ ಹರ್ಷ ದಾರುಣವಾಗಿ ಸಾವನ್ನಪ್ಪಿದ್ದಾನೆ. ನಾವು ಅಧಿವೇಶನದಲ್ಲಿ ಕುಳಿತು ಅತ್ತಿದ್ದೇವೆ. ಹಿಂದೂಗಳು ಎಂದು ಹೇಳಿಕೊಳ್ಳುವ ಜನರು ವಿಧಾನಸಭೆಯ ಒಳಗೆ ಇದ್ದರು, ಒಳಗೆ ಇದ್ದವರು ಈಶ್ವರಪ್ಪನವರನ್ನ ಇಳಿಸಬೇಕು ಎಂದು ಪ್ರತಿಭಟನೆ ಮಾಡುತಿದ್ದರು ಎಂದು ಕಿಡಿ ಕಾರಿದರು.

ಇದನ್ನೂ ಓದಿ : ಕಾಫಿರ್ ರನ್ನು ಕೊಂದರೆ ಸ್ವರ್ಗ ಪ್ರಾಪ್ತಿ?: ಮುಸ್ಲಿಂ ವಿದ್ವಾಂಸರಿಗೆ ಸಿ.ಟಿ.ರವಿ ಪ್ರಶ್ನೆ

ಎಂತಹ ದುರ್ಬುದ್ದಿ ಇದೆ ಎನ್ನುವುದನ್ನು ಅಧಿವೇಶನದಲ್ಲಿ ಕುಳಿತು ನೋಡಿದ್ದೇವೆ. ಎಷ್ಟು ದುರ್ದೈವದ ಸಂಗತಿ . ಈ ರೀತಿ ಆಗಬಾರದು. ಇದು ತಪ್ಪು. ನಮ್ಮ ಹುಡುಗನಿಗೆ ನ್ಯಾಯ ಕೊಡಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next