Advertisement

ರೂಪಕ್‌ ಕುಮಾರ್‌ ದತ್ತಾ ಅಧಿಕಾರ ಸ್ವೀಕಾರ ಇಂದು

03:45 AM Jan 31, 2017 | Harsha Rao |

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕರಾಗಿ ರೂಪಕ್‌ ಕುಮಾರ್‌ ದತ್ತಾ ಅವರು ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಲಿದ್ದಾರೆ. ಮಂಗಳವಾರ ಮಧ್ಯಾಹ್ನ ವೇಳೆಗೆ ದತ್ತಾ ನೇಮಕಾತಿ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದ್ದು, ಸಂಜೆ ವೇಳೆಗೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಿನ ಡಿಜಿಪಿ ಓಂ ಪ್ರಕಾಶ್‌ ಅವರ ಅವಧಿ ಜ.31 ರಂದು ಕೊನೆಗೊಳ್ಳಲಿದ್ದು, ಮಂಗಳವಾರ ಅವರು ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಯಲ್ಲಿ ದತ್ತಾ ಅವರು
ಅಧಿಕಾರ ಸ್ವೀಕರಿಸಲಿದ್ದಾರೆ. ಸೋಮವಾರ ಸಂಜೆ ದತ್ತಾ ನೇಮಕಾತಿ ಆದೇಶ ಹೊರಡಿಸಬೇಕಿತ್ತಾದರೂ ಕೇಂದ್ರ ಸೇವೆಯಲ್ಲಿರುವ ಆರ್‌.ಕೆ.ದತ್ತಾ ಅವರನ್ನು ಬಿಡುಗಡೆ ಮಾಡಿರುವ ಮಾಹಿತಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಾರದ ಕಾರಣ ಮಂಗಳವಾರ ಆದೇಶ ಹೊರಡಿಸಲಾಗುವುದು ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next