Advertisement

ರೋನಿ ಟೀಸರ್‌ ರಿಲೀಸ್‌: ಧರ್ಮಕೀರ್ತಿ ನಟನೆ

04:37 PM Apr 30, 2023 | Team Udayavani |

“ರೋನಿ’ ಎಂಭ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಮೋಶನ್‌ ಪೋಸ್ಟರ್‌ ಹಾಗೂ ಟೀಸರ್‌ ಬಿಡುಗಡೆಯಾಗಿದೆ.

Advertisement

ಎಂ.ರಮೇಶ್‌ ಹಾಗೂ ಪವನ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಕಿರಣ್‌.ಆರ್‌.ಕೆ ಅವರ ಕಥೆ,ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ಉನ್ನತ ಮಟ್ಟದ ಕೇಸ್‌ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿ ಒದಗಿ ಬಂದು ವರ್ಗಾವಣೆಗೊಳ್ಳುತ್ತಾರೆ. ನಂತರ ಕೇಸ್‌ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತವೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂಧವೇನು? ಎಂಬುದರ ಸುತ್ತ ಚಿತ್ರ ಸಾಗುತ್ತದೆ. ನಾಲ್ಕು ಪಾತ್ರಗಳು ಇರಲಿದ್ದು ರೋನಿ ಯಾರು ಎನ್ನುವುದು ಕ್ಲೈಮ್ಯಾಕ್ಸ್‌’ ಎಂದು ವಿವರ ನೀಡುತ್ತದೆ ತಂಡ. ಚಿತ್ರದಲ್ಲಿ ಧರ್ಮಕೀರ್ತಿರಾಜ್‌ ನಾಯಕ. ಬಾಂಬೆ ಮೂಲದ ರುತ್ವಿಪಟೇಲ್‌ ನಾಯಕಿ.

ಮತ್ತೂಂದು ಮುಖ್ಯ ಪಾತ್ರದಲ್ಲಿ ತಿಲಕ್‌, ಉಳಿದಂತೆ ಕೀರ್ತಿರಾಜ್‌, ವರ್ದನ್‌, ರಘುಪಾಂಡೇಶ್ವರ್‌, ಬಲರಾಜವಾಡಿ ನಟಿಸಿದ್ದಾರೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ಧಗೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next