Advertisement

ಶ್ರೇಷ್ಠ ಫ‌ುಟ್‌ಬಾಲಿಗ ಪ್ರಶಸ್ತಿ ಗೆದ್ದ ರೊನಾಲ್ಡೊ

12:40 AM Jan 05, 2019 | |

ದುಬೈ: ಖ್ಯಾತ ಫ‌ುಟ್‌ಬಾಲ್‌ ಆಟಗಾರ ಜ್ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ವರ್ಷದ ಶ್ರೇಷ್ಠ ಫ‌ುಟ್‌ಬಾಲಿಗ “ಗ್ಲೋಬ್‌ ಸಾಕರ್‌ ಪ್ರಶಸ್ತಿ’ ಪಡೆದಿದ್ದಾರೆ. ಅವರು ಮತ್ತೋರ್ವ ವಿಶ್ವವಿಖ್ಯಾತ ಆಟಗಾರ ಅರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿಯನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿರುವುದು ವಿಶೇಷ. 

Advertisement

ಇದೇ ವೇಳೆ ಅಭಿಮಾನಿಗಳ ನೆಚ್ಚಿನ ಆಟಗಾರ ಪ್ರಶಸ್ತಿಯನ್ನೂ ರೊನಾಲ್ಡೊ ಪಡೆದುಕೊಂಡರು. ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ ಮಾತನಾಡಿದ ರೊನಾಲ್ಡೊ “ಹೊಸ ವರ್ಷದ ಆರಂಭದಲ್ಲಿಯೇ ಇಂತಹ ಗೌರವ ನನಗೆ ಸಿಕ್ಕಿರುವುದು ಸ್ಫೂರ್ತಿ ತುಂಬಿದೆ. ನನ್ನ ಸಾಧನೆಗೆ ಬೆಂಬಲವಾಗಿ ನಿಂತಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next