ಪೋರ್ಚುಗಲ್: ವಿಶ್ವ ಖ್ಯಾತ ಫುಟ್ ಬಾಲ್ ಆಟಗಾರ ಕ್ರಿ
ಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್‌ನಲ್ಲಿರುವ ತನ್ನ ಐಷಾರಾಮಿ ಹೋಟೆಲ್‌ಗಳನ್ನು ಕೊರೊನಾ ಪೀಡಿತರ ಚಿಕಿತ್ಸೆಗಾಗಿ ಆಸ್ಪತ್ರೆಯಾಗಿ ಬದಲಾಯಿಸಿದ್ದಾರೆ.
ಮಾತ್ರವಲ್ಲ
ಕೊರೊನಾ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ. ವೈದ್ಯರು, ನರ್ಸ್‌ಗಳಿಗೆ ಸಂಪೂರ್ಣ ವೇತನ ನೀಡುವುದಾಗಿ ರೊನಾಲ್ಡೊ ಪ್ರಕಟಿಸಿದ್ದಾರೆ.
ಸದ್ಯದ ಪ್ರಕಾರ ಪೋರ್ಚುಗಲ್‌ನಲ್ಲಿ 169 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ.
ರೋನಾಲ್ಡೋ ಕೂಡಾ ಕೆಲವು ದಿನಗಳ ಮಟ್ಟಿಗೆ ನಿಗಾದಲ್ಲಿದ್ದು, ಸೋಂಕು ತಗುಲಿಲ್ಲ ಎಂದು ಖಾತ್ರಿಯಾಗಿದೆ. ಕೆಲವು ದಿನಗಳ ಹಿಂದೆ ಕೊರೊನಾ ವಿಷಯಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ರೊನಾಲ್ಡೊ ಹಂಚಿಕೊಂಡಿದ್ದ ಪತ್ರವೊಂದು ವೈರಲ್ ಆಗಿತ್ತು. “ಫುಟ್ಬಾಲಿಗನಾಗಿ ಮಾತನಾಡುತ್ತಿಲ್ಲ. ಮಗನಾಗಿ, ತಂದೆಯಾಗಿ ಮಾತನಾಡುತ್ತಿದ್ದೇನೆ’ ಎಂಬ ಪದಗಳು ವಿಶ್ವದಜನತೆಯ ಹೃದಯ ಗೆದ್ದಿತ್ತು