Advertisement

ರೊನಾಲ್ಡೊಗೆ 2 ವರ್ಷ ಜೈಲು, 25 ಕೋಟಿ ದಂಡ?

06:00 AM Jul 28, 2018 | Team Udayavani |

ಮ್ಯಾಡ್ರಿಡ್‌: ಖ್ಯಾತ ಫ‌ುಟ್‌ಬಾಲ್‌ ಆಟಗಾರ, ಸ್ಪೇನ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿರುದ್ಧದ ತೆರಿಗೆ ವಂಚನೆ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತಕ್ಕೆ ಬಂದಿದ್ದು, ಅವರಿಗೆ ಅಲ್ಲಿನ ನ್ಯಾಯಾಲಯ 25.50 ಕೋಟಿ ರೂ. ದಂಡ, 2 ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಪರ ವಾದ ಮಂಡಿಸಿದ್ದ ವಕೀಲರೊಬ್ಬರು ಈ ವಿಚಾರ ತಿಳಿಸಿದ್ದಾರೆ. 

Advertisement

ರೊನಾಲ್ಡೊ ಸರಕಾರಕ್ಕೆ 45 ಕೋ. ರೂ. ತೆರಿಗೆ ವಂಚನೆ ಮಾಡಿದ ಆರೋಪವಿದ್ದು, ಕೆಲವು ವರ್ಷಗಳಿಂದ ಈ ಪ್ರಕರಣ ಎದುರಿಸುತ್ತಿದ್ದರು. ಪ್ರಕರಣದ ಅಂತಿಮ ತೀರ್ಪು ಸದ್ಯದಲ್ಲೇ ಹೊರಬೀಳಲಿದೆಯಾದರೂ, ಜೈಲು ಶಿಕ್ಷೆ ವಿಧಿಸುವುದು ನ್ಯಾಯಾಲಯದ ತೀರ್ಮಾನಕ್ಕೆ ಬಿಟ್ಟ ವಿಚಾರ ಎನ್ನಲಾಗಿದೆ. ಜೈಲು ಶಿಕ್ಷೆಯ ಅವಧಿಯನ್ನು ದಂಡದ ರೂಪಕ್ಕೆ ಬದಲಾಯಿ ಸುವ ಅವಕಾಶವೂ ಇದೆ ಎಂದು ವಕೀಲರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next