Advertisement

ರೊನಾಲ್ಡೊ ಟೀ ಶರ್ಟ್‌ಗಳನ್ನು ಮಾರಿ 420 ಕೋಟಿ ರೂ. ಗಳಿಕೆ

06:00 AM Jul 18, 2018 | Team Udayavani |

ರೋಮ್‌(ಇಟಲಿ): ಇತ್ತೀಚೆಗಷ್ಟೇ ವಿಶ್ವವಿಖ್ಯಾತ ಫ‌ುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 970 ಕೋಟಿ ರೂ.ಗೆ ಇಟಲಿಯ ಜ್ಯುವೆಂಟಸ್‌ ಕ್ಲಬ್‌ಗ ಮಾರಾಟಗೊಂಡಿದ್ದಾರೆ. ದೀರ್ಘ‌ಕಾಲ ರಿಯಲ್‌ ಮ್ಯಾಡ್ರಿಡ್‌ನಲ್ಲಿದ್ದ ರೊನಾಲ್ಡೊ ಜ್ಯುವೆಂಟಸ್‌ಗೆ ಹಾರಿದ್ದನ್ನು ಮರೆಯುವ ಮುನ್ನವೇ ಮತ್ತೂಂದು ಸುದ್ದಿ ಹೊರಬಿದ್ದಿದೆ.

Advertisement

ಜ್ಯುವೆಂಟಸ್‌ ಕ್ಲಬ್‌ ರೊನಾಲ್ಡೊ ಹೆಸರಿನ ಟೀಶರ್ಟ್‌ ಮಾರಿಯೇ 420 ಕೋಟಿ ರೂ. ಗಳಿಸಿದೆ. ಈ ಮೊತ್ತ ಮತ್ತಷ್ಟು ಏರಿಕೆಯಾಗಲಿದೆ! ಜ್ಯುವೆಂಟಸ್‌ ಸಿಆರ್‌7 ಹೆಸರಿನ ಟೀಶ ರ್ಟನ್ನು ಮಾರುಕಟ್ಟೆಗೆ ಬಿಟ್ಟಿದೆ. ಅಂತ ರ್ಜಾಲದಲ್ಲಿ 5 ಲಕ್ಷ ಟೀಶರ್ಟ್‌ಗಳು ಮಾರಾಟವಾಗಿದ್ದರೆ, ಮಳಿಗೆಗಳಲ್ಲಿ
ಕೆಲವೇ ಗಂಟೆಗಳಲ್ಲಿ 20 ಸಾವಿರ ಟೀಶರ್ಟ್‌ ಬಿಕರಿಯಾಗಿವೆ! ರೊನಾಲ್ಡೊ ಟೀಶರ್ಟ್‌ಗಾಗಿ ಬೇಡಿಕೆ ಸತತವಾಗಿ ಏರುತ್ತಲೇ ಇದೆ. ಆದ್ದರಿಂದ ಬಹುತೇಕ ರೊನಾಲ್ಡೊ ಖರೀದಿಗೆ ನೀಡಿದ ಮುಕ್ಕಾಲು ಭಾಗ ಹಣವನ್ನು ಟೀಶರ್ಟ್‌ ಮಾರಾಟ ಮೂಲಕವೇ ಜ್ಯುವೆಂಟಸ್‌ ಪಡೆದುಕೊಳ್ಳುವ ಸಾಧ್ಯತೆಯಿದೆ! ಪ್ರಾರಂಭದಲ್ಲಿ ರಿಯಲ್‌ ಮ್ಯಾಡ್ರಿಡ್‌ ನಿಂದ ರೊನಾಲ್ಡೊ ಮಾರಾಟ ಮೊತ್ತ ಅಂದಾಜು 2000 ಕೋಟಿ ರೂ. ಇತ್ತು.

ಈ ದುಬಾರಿ ಮೊತ್ತ ಪಾವತಿಸಲು ಫ್ರಾಂಚೈಸಿಗಳು ಹಿಂಜರಿದ ನಂತರ ಮ್ಯಾಡ್ರಿಡ್‌ ಮೊತ್ತವನ್ನು 1000 ಕೋಟಿ ರೂ.ಗಿಂತ ಕಡಿಮೆ ಮಾಡಿತ್ತು. ಅದಾದ ಮೇಲೆಯೇ ಜ್ಯುವೆಂಟಸ್‌ ರೊನಾಲ್ಡೊರನ್ನು ಖರೀದಿಸಿತ್ತು! 

Advertisement

Udayavani is now on Telegram. Click here to join our channel and stay updated with the latest news.

Next