Advertisement

ರೊನಾಲ್ಡೊ ಕೊಠಡಿಯ ತಿಂಗಳ ಬಾಡಿಗೆ 2.5 ಕೋಟಿ ರೂ.! ಅಂಥದ್ದೇನಿದೆ ಆ ಕೊಠಡಿಯಲ್ಲಿ?

10:42 AM Jan 10, 2023 | Team Udayavani |

ರಿಯಾದ್: ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನಿಂದ ಹೊರಬಿದ್ದಿರುವ ವಿಶ್ವವಿಖ್ಯಾತ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸೌದಿ ಅರೇಬಿಯದ ಅಲ್‌ ನಾಸರ್ ಸೇರಿಕೊಂಡಿರುವುದು ಹಳೆಯ ವಿಚಾರ.

Advertisement

ಈಗವರು ಸೌದಿ ರಾಜಧಾನಿ ರಿಯಾಧ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಕಿಂಗ್‌ ಡಮ್‌ ಟವರ್‌ ನ ಫೋರ್‌ ಸೀಸನ್‌ ಹೋಟೆಲ್‌ನಲ್ಲಿ ಸದ್ಯ ಅವರಿಗೊಂದು ಕೋಣೆ ಗಳ ಗುತ್ಛ ಸಿಕ್ಕಿದೆ. ಅದರ ತಿಂಗಳ ಬಾಡಿಗೆ ಎಷ್ಟು ಗೊತ್ತಾ? 2.5 ಕೋಟಿ ರೂ.!

ಇದನ್ನೂ ಓದಿ:“ಸಾವಿನ ಮುನ್ನ ತುನಿಶಾ 15 ನಿಮಿಷ ʼಆ ವ್ಯಕ್ತಿಯ ಜೊತೆʼ ವಿಡಿಯೋ ಕಾಲ್‌ ನಲ್ಲಿ ಮಾತಾನಾಡಿದ್ದಳು”… ಶೀಜಾನ್‌ ವಕೀಲರು

ಈ ದುಬಾರಿ ಮೊತ್ತದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅರ್ಥೈಸಬಹುದು. ಆದರೆ ರೊನಾಲ್ಡೊ ಅಷ್ಟು ಬಾಡಿಗೆ ಕೊಡುವುದು ಮಾತ್ರ ಸತ್ಯ. ಕಿಂಗ್‌ಡಮ್‌ ಟವರ್‌ ಸೌದಿಯಲ್ಲಿರುವ ಅತಿ ಎತ್ತರದ ಟವರ್‌ಗಳಲ್ಲೊಂದು, ಇಲ್ಲಿರುವ ಹೋಟೆಲ್‌ ಕೊಠಡಿಗಳ ಬಾಡಿಗೆ ಅತ್ಯಂತ ದುಬಾರಿಯಾಗಿ ರುವುದು ಖಚಿತ. ಈ ಮಟ್ಟದ ದುಬಾರಿಯೆಂದಾದರೆ ಅಲ್ಲೇನಿರಬಹುದು ಎನ್ನುವುದು ಸದ್ಯದ ಪ್ರಶ್ನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next