Advertisement

ಪ್ರವಾಹ ಎದುರಿಸಲು ಸನ್ನದ್ಧ

08:16 PM Jun 09, 2021 | Team Udayavani |

ರೋಣ: ನವೀಲು ತೀರ್ಥ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು, ಯಾವ ಸಮಯದಲ್ಲಾದರೂ ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆ ಇದೆ. ರೋಣ ತಾಲೂಕಿನ ಹೊಳೆಆಲೂರು ಹೂಬಳಿ ವ್ಯಾಪ್ತಿಯ ನದಿ ಪಾತ್ರದ 16 ಗ್ರಾಮಗಳ ಜನರು ಎಚ್ಚರ ವಹಿಸಬೇಕೆಂದು ರೋಣ ತಹಶೀಲ್ದಾರ್‌ ಜೆ.ಬಿ.ಜಕ್ಕನಗೌಡ್ರ ಹೇಳಿದರು.

Advertisement

ಮಂಗಳವಾರ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ನಡೆದ ಅತಿವೃಷ್ಟಿ ಹಾಗೂ ಪ್ರವಾಹ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವೀಲು ತೀರ್ಥ ಜಲಾಶಯದ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗುತ್ತಿದೆ. ಒಳ ಹರಿವು ಹೆಚ್ಚಾದಂತೆ ಜಲಾಶಯದಿಂದ ಯಾವ ಸಮಯದಲ್ಲಾದರೂ ನೀರು ಹರಿಬಿಡುವ ಸಾಧ್ಯತೆ ಇದೆ.

ರೋಣ ತಾಲೂಕಿನ ನದಿ ಪಾತ್ರದ ಜನರು ಎಚ್ಚರ ವಹಿಸಬೇಕು. ತಾಲೂಕು ಆಡಳಿತ ಸಂಭವನೀಯ ಪ್ರವಾಹ ಎದುರಿಸಲು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಹೇಳಿದರು. ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿ ಕಾರಿ ಸಂತೋಷ ಪಾಟೀಲ ಮಾತನಾಡಿ, ನದಿ ಪಾತ್ರದಲ್ಲಿ ಬರುವ ಗ್ರಾಮಗಳಲ್ಲಿ ಪ್ರವಾಹ ಎದುರಿಸಲು ಸಕಲ ರೀತಿಯಲ್ಲಿ ತಾಲೂಕು ಆಡಳಿತ ಸಜ್ಜಾಗಿದೆ.

ಈಗಾಗಲೇ ನದಿ ಪಾತ್ರದಲ್ಲಿ ಬರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರವಾಹದ ಕುರಿತು ಸೂಚನೆ ನೀಡಲಾಗಿದೆ.ನವಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸೂಚಿಸಲಾಗಿದೆ. ಹಾಗೂ ನದಿ ಪಾತ್ರದ ಆಯಾ ಗ್ರಾಮಗಳಲ್ಲಿ ಆಸರೆ ಕೇಂದ್ರಗಳನ್ನು ತೆರೆಯಲು ಚಿಂತಿಸಲಾಗುತ್ತಿದೆ. ಅಲ್ಲದೇ, ದನಕರುಗಳಿಗೆ ಮೇವು ಹಾಗೂ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಔಷಧಗಳನ್ನು ಸಮರ್ಪಕ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next