Advertisement

Rolls-Royce- ಟ್ಯಾಂಕರ್ ಅಪಘಾತ: ಪಾರಾದ ಕುಬೇರ್ ಗ್ರೂಪ್ ನಿರ್ದೇಶಕರ ತನಿಖೆ

04:06 PM Aug 27, 2023 | Team Udayavani |

ಹೊಸದಿಲ್ಲಿ: ರೋಲ್ಸ್ ರಾಯ್ಸ್ ಮತ್ತು ತೈಲ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ ಇಬ್ಬರನ್ನು ಬಲಿತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕುಬೇರ್ ಗ್ರೂಪ್ ನಿರ್ದೇಶಕ ವಿಕಾಸ್ ಮಾಲು ಅವರಿಗೆ ತನಿಖೆಗೆ ಸಹಕರಿಸುವಂತೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

Advertisement

ಹರಿಯಾಣದ ಉಮ್ರಿ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ದೆಹಲಿ-ಮುಂಬೈ-ಬರೋಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಅಪಘಾತದಲ್ಲಿ ಆಯಿಲ್ ಟ್ಯಾಂಕರ್ ಚಾಲಕ ಮತ್ತು ಸಹಾಯಕ ಸಾವನ್ನಪ್ಪಿದ್ದು , ಕಾರಿನಲ್ಲಿದ್ದ ಮಾಲು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ತನಿಖೆಗೆ ಸೇರುವಂತೆ ಮಾಲು ಅವರನ್ನು ಕೇಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ತೈಲ ಟ್ಯಾಂಕರ್ ಅನ್ನು ರಸ್ತೆಯ ವಿರುದ್ಧ ದಿಕ್ಕಿನಲ್ಲಿಚಾಲನೆ ಮಾಡಲಾಗುತ್ತಿತ್ತು, ನಗೀನಾ ಪೊಲೀಸ್ ಠಾಣಾ ವ್ಯಾಪ್ತಿಯ ಉಮ್ರಿ ಗ್ರಾಮದ ಬಳಿ ಐಷಾರಾಮಿ ಕಾರಿಗೆ ಢಿಕ್ಕಿ ಹೊಡೆದಿದೆ. ಆದರೆ ಅಪಘಾತದ ದಿನ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ ನಿಲ್ದಾಣದಲ್ಲಿ ಹಿಂದಿನಿಂದ ಬಂದ ಕಾರು ಆಯಿಲ್ ಟ್ಯಾಂಕರ್‌ನ ಮುಂಭಾಗದ ಟೈರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟ್ಯಾಂಕರ್ ಪಲ್ಟಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮಾಲು ಅವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮಾಲು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next