Advertisement

Mangaluru ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಡಾ| ಎಂ. ಶಾಂತಾರಾಮ ಶೆಟ್ಟಿ

10:09 PM Jan 21, 2024 | Team Udayavani |

ಮಂಗಳೂರು: ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಯುವ ಸಮುದಾಯಕ್ಕೆ ಉತ್ತಮ ಭವಿಷ್ಯ ರೂಪಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ ಎಂದು ನಿಟ್ಟೆ ವಿ.ವಿ.ಯ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಹೇಳಿದರು.

Advertisement

ಡೊಂಗರಕೇರಿ ಕೆನರಾ ವಿದ್ಯಾ ಸಂಸ್ಥೆಯ ಸುಧೀಂದ್ರ ಸಭಾಂಗಣದಲ್ಲಿ ರವಿವಾರ ಟೀಚರ್ಸ್‌ ಬ್ಯಾಂಕ್‌ ಲಿ. (ಟೀಚರ್ಸ್‌ ಕೋ ಆಪರೇಟಿವ್‌ ಬ್ಯಾಂಕ್‌ ನಿಯಮಿತ)ನ 109ನೇ ವರ್ಷದ ಸಂಸ್ಥಾಪನ ದಿನಾಚರಣೆ ಮತ್ತು ಐಎಂಪಿಎಸ್‌ ಹಾಗೂ ಹೋಮ್‌ ಪ್ಲಾಟ್‌ ಲೋನ್‌ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

109 ವರ್ಷದ ಹಿಂದೆ ಶಿರಾಲಿ ಸುಬ್ಬರಾವ್‌ ಅವರಿಂದ ಸ್ಥಾಪಿತವಾದ ಟೀಚರ್ ಬ್ಯಾಂಕ್‌ ಇಂದು ವ್ಯಾಪಕವಾಗಿ ಬೆಳೆದು, ಎಲ್ಲ ಶಿಕ್ಷಕರಿಗೆ ಬ್ಯಾಂಕ್‌ ಆಶಾಕಿರಣವಾಗಿದೆ. ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸುವ ಮೂಲಕ ಸಮಗ್ರ ಶಿಕ್ಷಕ ವರ್ಗಕ್ಕೆ ದಾರಿದೀಪವಾಗಲಿ ಎಂದರು.

“ಐಎಂಪಿಎಸ್‌ ಸೇವೆ’ಯನ್ನು ಅನಾವರಣ ಮಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿರಣ್‌ ಕುಮಾರ್‌ ಕೊಡ್ಗಿ ಮಾತನಾಡಿ, ಟೀಚರ್ ಬ್ಯಾಂಕ್‌ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸಿಸುವ ಮೂಲಕ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಾ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲಿ ಎಂದರು.

“ಹೋಂ ಪ್ಲಾಟ್‌ ಲೋನ್‌’ ಸೇವೆ ಅನಾವರಣಗೊಳಿಸಿದ ಹಂಪಿ ಕನ್ನಡ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ ಮಾತನಾಡಿ, ಟೀಚರ್ ಬ್ಯಾಂಕ್‌ನ ಕುರಿತು ಮುಂದಿನ ದಿನಗಳಲ್ಲಿ ಕೃತಿಯ ಮೂಲಕ ದಾಖಲೀಕರಣ ಮಾಡುವ ಕೆಲಸವಾಗಬೇಕು ಎಂದರು.

Advertisement

ಮಂಗಳೂರು ವಿ.ವಿ. ರಾಜಕೀಯ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ದಯಾನಂದ ನಾಯಕ್‌ ಮಾತನಾಡಿ, ಇಂದು ಬ್ಯಾಂಕಿಂಗ್‌ ಕ್ಷೇತ್ರದಲ್ಲಿಯೂ ಕಡ್ಡಾಯವಾಗಿರುವ ಸಿಎಸ್‌ಆರ್‌ ಸೇವೆಯನ್ನು ಟೀಚರ್ ಬ್ಯಾಂಕ್‌ ಆರಂಭವಾಗುವಾಗಲೇ ಮಾಡಿಕೊಂಡು ಬಂದಿದೆ ಎಂದರು.

ಮಹಾಪ್ರಬಂಧಕ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು. ಬ್ಯಾಂಕ್‌ನ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ ವಂದಿಸಿದರು. ಮಾಜಿ ಅಧ್ಯಕ್ಷ ಡಾ| ಅಶೋಕ್‌ ಕುಮಾರ್‌ ಶೆಟ್ಟಿ ನಿರ್ವಹಿಸಿದರು.

ಹೊಸ ಶಾಖೆಗಳನ್ನು ಆರಂಭಿಸುವ ಗುರಿ
ಟೀಚರ್ ಬ್ಯಾಂಕ್‌ ರಾಜ್ಯದ 18 ಜಿಲ್ಲೆಗಳಲ್ಲಿ 14 ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ದಾವಣಗೆರೆ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಗುರಿ ಹೊಂದಿದೆ. ಶಿಕ್ಷಕರಿಗೆ 500 ರೂ. ಸಾಲ ಕೊಡಲು ಆರಂಭಿಸಿದ ಬ್ಯಾಂಕ್‌ ಇಂದು 50 ಲಕ್ಷ ರೂ. ವರೆಗೆ ವೈಯಕ್ತಿಕ ಸಾಲ ನೀಡುತ್ತಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಪರವಾನಿಗೆ ಪಡೆದು ಅಧಿಕೃತವಾಗಿ ಬ್ಯಾಂಕ್‌ ಆಗಿ ಪರಿವರ್ತನೆಗೊಂಡಿದ್ದು, ಆಧುನಿಕ ಬ್ಯಾಂಕಿನ ಎಲ್ಲ ಸೇವೆಗಳು ಗ್ರಾಹಕರಿಗೆ ದೊರೆಯುತ್ತಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next