Advertisement
ಸಮೀಪದ ಬಾದನಹಟ್ಟಿ ಗ್ರಾಮದ ಯಲ್ಲಾಪುರ ರಸ್ತೆಯ ಶ್ರೀ ನಂದಿ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶ್ರೀ ನಂದಿ ಚಿತ್ತಾರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಶ್ರಿವಚನ ನೀಡಿ ಮಾತನಾಡಿದ ಅವರು, ದೇವರ ಹುಡುಕಾಟದಲ್ಲಿ ಹಾದಿ ತಪ್ಪುವ ಆತ್ಮಗಳನ್ನು ಮತ್ತೆ ಸರಿದಾರಿಗೆ ತರುವ ಕೆಲಸ ಗುರು ಶಿಷ್ಯರ ಸಂಬಂಧ ಮಾಡುತ್ತದೆ. ಮೊದಲಲ್ಲಿ ಇದನ್ನು ಅನೇಕ ಆಧ್ಯಾತ್ಮಿಕ ಹಾದಿಗಳು ಮತ್ತು ಗುರುಗಳ ನಡುವೆ ತುಲನೆ ಮಾಡುವುದು ಒಳಿತು ಎಂದರು.
Related Articles
Advertisement
ಬಡತನದಲ್ಲಿ ಹುಟ್ಟಿ ದೇಶಕ್ಕಾಗಿ ಹೋರಾಡಿದ ಕೆಲ ಮಹನೀಯರಂತವರು ಪ್ರತಿಯೊಂದು ಶಾಲೆಯಲ್ಲಿ ಹುಟ್ಟಬೇಕಾದ ಅನಿವಾರ್ಯತೆ ಇವತ್ತಿನ ದಿನಮಾನಗಳಲ್ಲಿ ಇದೆ ಎಂದರು.
ಮನುಷ್ಯನ ಜೀವನದಲ್ಲಿ ಯಾವುದು ಶಾಶ್ವತಲ್ಲ, ಯಾರು ಏನೇ ಸಂಪಾದಿಸಿದರು ಅದು ಉಳಿಯುವುದಿಲ್ಲ, ಜೊತೆಗೆ ತಗೊಂಡು ಹೋಗುವುದಿಲ್ಲ ಶಾಶ್ವತವಾಗಿ ಉಳಿಯುವುದು ಶಿಕ್ಷಣ ಅದು ಮಾನವೀಯ ಮೌಲ್ಯಗಳಿಂದ ಕೂಡಿದ್ರೆ ಮಾತ್ರ ಅದಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸ್ಮರಿಸಿದರು.
ಬಹುತೇಕ ಶಾಲೆಗಳಲ್ಲಿ ಮಕ್ಕಳು ವಿದ್ಯಾ ಪಡಿಯುವ ಬಾಲ್ಯದಲ್ಲೇ ಜಾತಿಯ ಸಮಸ್ಯೆಗಳು ಎಲ್ಲಂದರಲ್ಲಿ ತೆಲಾಡುತ್ತಿವೆ ಅದು ಮೊದಲು ನಿವಾರಣೆ ಯಾಗಬೇಕು ಎಂದರು. ಶಿಕ್ಷಕರು ಇದರ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಒಂದೇ ಅಲ್ಲ ಅದರ ಜೊತೆಗೆ ಅವರಿಗೆ ಕೃಷಿ ಬಗ್ಗೆ, ದುಡಿಯುವುದರ ಬಗ್ಗೆ, ವ್ಯವಹಾರದ ಬಗ್ಗೆ, ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಯಪಡಿಸಬೇಕಾಗಿದೆ ಎಂದು ತಿಳಿಸಿದರು.
ಉಪಾಧ್ಯಯರು ಮಕ್ಕಳಿಗೆ ಭೋದನೆ ಮಾಡುವಾಗ ಶಿಕ್ಷಣಕ್ಕೆ ಅತ್ತಿರ ಇರಬೇಕು ಅಂದಾಗ ಮಾತ್ರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಾಲಿಕ್ಕೆ ಸಾಧ್ಯ ಎಂದು ತಿಳಿಸಿದರು.
ಇದೆ ವೇಳೆ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ನೃತ್ಯ, ಸಂಸ್ಕೃತಿಕ ಕಾರ್ಯಕ್ರಮಗಳು ನೆರೆವೇರಿದವು. ನೋಡುಗರ ಗಮನ ಸೇಳದವು.
ಈ ಸಂದರ್ಭದಲ್ಲಿ ಕೊಕ್ಕರಚೇಡು ಶ್ರೀ ಶಂಕರನಂದ ಸೇವಾಶ್ರಮದ ಶ್ರೀ ಗುರು ಚಾರನಂದಗಿರಿ ಗುರು ಮತಾಜೀ, ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು, ಶ್ರೀ ನಂದಿ ಸಂಸ್ಥೆಯ ಅಧ್ಯಕ್ಷ ಜೆ. ರವಿರೆಡ್ಡಿ, ಕೆಎಂಎಸ್ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಬಳ್ಳಾರಿ ಡಿಡಿಪಿಐ ಅಂದಾನಪ್ಪ ಎಂ.ವಡಿಗೇರಿ, ಬಿಇಒ ವೆಂಕಟೇಶ ರಾಮಚಂದ್ರಪ್ಪ, ಕಾಲೇಜಿನ ಪ್ರಾಚಾರ್ಯ ಮಹೇಂದ್ರ, ಉಪ ಪ್ರಚಾರ್ಯ ಗೋವಿಂದ ರೆಡ್ಡಿ, ಮತ್ತು ಬಾದನಹಟ್ಟಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರು ಇದ್ದರು.