Advertisement

ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮ

03:38 PM Feb 13, 2021 | Team Udayavani |

ಚೆನ್ನೈ: ಕಳೆದ ಕೆಲ ಟೆಸ್ಟ್ ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲು ವಿಫಲವಾಗಿದ್ದ ಆರಂಭಿಕ ಆಟಗಾರ ರೋಹಿತ್ ಶರ್ಮ ಚೆನ್ನೈನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದಾರೆ. ಇದೇ ವೇಳೆ ಹಿಟ್ ಮ್ಯಾನ್ ರೋಹಿತ್ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

Advertisement

ರೋಹಿತ್ ಶರ್ಮ ಇಂಗ್ಲೆಂಡ್ ವಿರುದ್ಧ ಮೂರು ಮಾದರಿ ಕ್ರಿಕೆಟ್ (ಟೆಸ್ಟ್, ಟಿ20, ಏಕದಿನ) ನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದರು. ಒಟ್ಟು ನಾಲ್ಕು ಎದುರಾಳಿ ದೇಶಗಳ ವಿರುದ್ಧ ರೋಹಿತ್ ಈ ಸಾಧನೆ ಮಾಡಿದ್ದಾರೆ. ( ಶ್ರೀಲಂಕಾ, ವೆಸ್ಟ್ ಇಂಡೀಸ್, ದ.ಆಫ್ರಿಕಾ ಮತ್ತು ಇಂಗ್ಲೆಂಡ್) ಈ ದಾಖಲೆ ಮಾಡಿದ ಏಕೈಕ ಆಟಗಾರ ರೋಹಿತ್.

ಇದನ್ನೂ ಓದಿ:ಕುಸಿದ ಟೀಂ ಇಂಡಿಯಾಗೆ ನೆರವಾದ ರೋಹಿತ್: ಚೆಪಾಕ್ ನಲ್ಲಿ ಹಿಟ್ ಮ್ಯಾನ್ ಭರ್ಜರಿ ಶತಕ

ರೋಹಿತ್ ಇಂದು ಟೆಸ್ಟ್ ಕ್ರಿಕೆಟ್ ನ ಏಳನೇ ಶತಕ ಬಾರಿಸಿದರು. ಎಲ್ಲಾ ಏಳು ಶತಕಗಳು ಭಾರತದಲ್ಲೇ ಬಂದಿವೆ. ಈ ದಾಖಲೆ ಬರೆದ ಮೊದಲ ಭಾರತೀಯ ರೋಹಿತ್.

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನಕ್ಕೇರಿದರು. 13 ಇನ್ನಿಂಗ್ಸ್ ನಲ್ಲಿ ರೋಹಿತ್ ನಾಲ್ಕು ಶತಕ ಬಾರಿಸಿದರೆ, ಮೊದಲ ಸ್ಥಾನದಲ್ಲಿರುವ ಆಸೀಸ್ ನ ಮಾರ್ನಸ್ ಲಬುಶೇನ್ 23 ಇನ್ನಿಂಗ್ಸ್ ನಲ್ಲಿ ಐದು ಶತಕ ಬಾರಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಭಾರತೀಯ ಆರಂಭಿಕ ಆಟಗಾರರ ಪಟ್ಟಿಯಲ್ಲಿ ರೋಹಿತ್ ಮೂರನೇ ಸ್ಥಾನಕ್ಕೇರಿದರು. ರೋಹಿತ್ ಇಂದು ಆರಂಭಿಕ ಆಟಗಾರನಾಗಿ 35 ನೇ ಅಂತಾರಾಷ್ಟ್ರೀಯ ಶತಕ ಗಳಿಸಿದರು. 45 ಶತಕ ಸಿಡಿಸಿರುವ ಸಚಿನ್ ಮೊದಲ ಸ್ಥಾನದಲ್ಲಿದ್ದರೆ, 36 ಶತಕಗಳೊಂದಿಗೆ ಸೆಹವಾಗ್ ಎರಡನೇ ಸ್ಥಾನದಲ್ಲಿದ್ದಾರೆ.

ದ್ವಿತೀಯ ಟೆಸ್ಟ್ ನ ಮೊದಲ ದಿನದಾಟದಲ್ಲಿ 70 ಓವರ್ ಅಂತ್ಯಕ್ಕೆ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ. ರೋಹಿತ್ ಶರ್ಮಾ ಅಜೇಯ 153 ರನ್ ಗಳಿಸಿದರೆ, ಉಪನಾಯಕ ಅಜಿಂಕ್ಯ ರಹಾನೆ 59 ರನ್ ಗಳಿಸಿ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next