Advertisement

ಭಾರತಕ್ಕೆ ಮೊದಲಿಗರಾಗಿ ಬಂದ ರೋಹಿತ್‌

12:31 AM Jul 14, 2019 | Sriram |

ಮುಂಬಯಿ: ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋಲುವ ಮೂಲಕ ಭಾರತದ ವಿಶ್ವಕಪ್‌ ಅಭಿಯಾನ ಅಂತ್ಯವಾಗಿದೆ. ಸದ್ಯ ಭಾರತ ತಂಡ ತವರಿಗೆ ಆಗಮಿಸಿಲ್ಲ. ಆದರೆ ರೋಹಿತ್‌ ಶರ್ಮ ಮೊದಲಿಗರಾಗಿ ಮುಂಬಯಿಗೆ ಬಂದಿಳಿದಿದ್ದಾರೆ.

Advertisement

ಶನಿವಾರ ಪತ್ನಿ ರಿತಿಕಾ, ಮಗಳು ಸಮೈರಾ ಜತೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ರೋಹಿತ್‌ ಕಾಣಿಸಿಕೊಂಡಿದ್ದಾರೆ. ರೋಹಿತ್‌ ಕಾಣುತ್ತಲೇ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಇದರಿಂದ ಎಚ್ಚೆತ್ತ ರೋಹಿತ್‌ ತತ್‌ಕ್ಷಣ ತಮ್ಮ ಕಾರಿನಲ್ಲಿ ಮನೆಗೆ ತೆರಳಿದ್ದಾರೆ. ವಿರಾಟ್‌ ಕೊಹ್ಲಿ ಸೇರಿದಂತೆ ಆಟಗಾರರು ರವಿವಾರ ಆಗಮಿಸುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next