Advertisement

Team India; ಆಯ್ಕೆಗಾರರ ಕೈಯಲ್ಲಿ ರೋಹಿತ್‌, ವಿರಾಟ್‌ ಕೊಹ್ಲಿ ಭವಿಷ್ಯ: ಗಾವಸ್ಕರ್‌

11:02 PM Jan 07, 2025 | Team Udayavani |

ಸಿಡ್ನಿ: ಆಸ್ಟ್ರೇಲಿಯ ಪ್ರವಾಸದಲ್ಲಿ ತೀವ್ರ ರನ್‌ ಬರಗಾಲ ಅನುಭವಿಸಿದ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ಭವಿಷ್ಯ ಆಯ್ಕೆಗಾರರ ಕೈಯಲ್ಲಿದೆ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಕಳೆದ ಆರು ತಿಂಗಳಲ್ಲಿ ಭಾರತದ ಟೆಸ್ಟ್‌ ಹಿನ್ನಡೆಗೆ ಬ್ಯಾಟಿಂಗ್‌ ವೈಫ‌ಲ್ಯವೇ ಮುಖ್ಯ ಕಾರಣ. ಹೀಗಾಗಿ ಗೆಲ್ಲಬಹುದಾಗಿದ್ದ ಪಂದ್ಯಗಳನ್ನೂ ನಾವು ಕಳೆದುಕೊಂಡೆವು. ಇದರಿಂದ ಮೊದಲ ಬಾರಿಗೆ ಭಾರತ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಲು ವಿಫ‌ಲವಾಯಿತು. ಇದರ ನೂತನ ಆವೃತ್ತಿಗಾಗಿ ಟೆಸ್ಟ್‌ ತಂಡದಲ್ಲಿ ಸೂಕ್ತ ಬದಲಾವಣೆ ಅತ್ಯಗತ್ಯ’ ಎಂದು ಪಿಟಿಐಗೆ ನೀಡಿದ ಸಂದರ್ಶನಲ್ಲಿ ಗಾವಸ್ಕರ್‌ ಹೇಳಿದರು.

“ನಮ್ಮ ದೇಶಿ ಕ್ರಿಕೆಟ್‌ನಲ್ಲಿ ಬಹಳಷ್ಟು ಮಂದಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದರೆ ಅವಕಾಶ ನೀಡದೇ ಇವರ ಅಂತಾರಾಷ್ಟ್ರೀಯ ಮಟ್ಟದ ಸಾಮರ್ಥ್ಯವನ್ನು ಅರಿಯುವುದಾದರೂ ಹೇಗೆ? ಆಸ್ಟ್ರೇಲಿಯ ಪ್ರವಾಸಕ್ಕೆ ನಿತೀಶ್‌ ಕುಮಾರ್‌ ರೆಡ್ಡಿ ಅವರಂಥ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿದ್ದು ಉತ್ತಮ ಬೆಳವಣಿಗೆ. ಆಯ್ಕೆ ಮಂಡಳಿ ಇಂಥ ಕೆಲವು ದಿಟ್ಟ ಹೆಜ್ಜೆಗಳನ್ನು ಇಡಬೇಕಿದೆ’ ಎಂದು ಗಾವಸ್ಕರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next