Advertisement

MI: ಸೂರ್ಯ, ಹಾರ್ದಿಕ್‌ ಗಿಂತ ಕಡಿಮೆ ಬೆಲೆಗೆ ರಿಟೆನ್ಶನ್:‌ ರೋಹಿತ್‌ ಹೇಳಿದ್ದೇನು?

11:27 AM Nov 01, 2024 | Team Udayavani |

ಮುಂಬೈ: ಟೀಂ ಇಂಡಿಯಾ ನಾಯಕ, ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಮುಂದಿನ ಋತುವಿಗೆ ಉಳಿಸಿಕೊಂಡಿದೆ.

Advertisement

ಆಟಗಾರರ ರಿಟೆನ್ಶನ್‌ ಪಟ್ಟಿಯಲ್ಲಿ ಗುರುವಾರ (ಅ.31) ಬಿಡುಗಡೆ ಮಾಡಿದ್ದು, ಮುಂಬೈ ಫ್ರಾಂಚೈಸಿಯು ಐವರು ಆಟಗಾರರನ್ನು ಉಳಿಸಿಕೊಂಡಿದೆ. ಅವರಲ್ಲಿ ರೋಹಿತ್‌ ಶರ್ಮಾ ಅವರನ್ನು ನಾಲ್ಕನೇ ಆಯ್ಕೆಯಾಗಿ ಉಳಿಸಿಕೊಳ್ಳಲಾಗಿದೆ.

ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡವು ತನ್ನಲ್ಲಿ ವೇಗಿ ಜಸ್‌ ಪ್ರೀತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌, ರೋಹಿತ್‌ ಶರ್ಮಾ ಮತ್ತು ತಿಲಕ್‌ ವರ್ಮಾ ಅವರನ್ನು ಉಳಿಸಿಕೊಂಡಿದೆ.

ಮೊದಲ ಮೂರು ಆಯ್ಕೆಯಲ್ಲಿ ತಾನಿರದ ಬಗ್ಗೆ ರೋಹಿತ್‌ ಶರ್ಮಾ ಮಾತನಾಡಿದ್ದಾರೆ. “ನಾನು ಟಿ20 ಸ್ವರೂಪದಿಂದ ನಿವೃತ್ತಿ ಹೊಂದಿರುವುದರಿಂದ, ಇದು ನನಗೆ ಸರಿಯಾದ ರಿಟೆನ್ಶನ್ ಜಾಗವಾಗಿದೆ. ಉನ್ನತ ಮಟ್ಟದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ಆದ್ಯತೆ ಸಿಗಬೇಕು. ಅದನ್ನೇ ನಾನು ನಂಬುತ್ತೇನೆ. ಆಟಗಾರರು ಹರಾಜಿಗೆ ಬಂದ ನಂತರ ಮತ್ತೆ ಅವರನ್ನು ಉಳಿಸಿಕೊಳ್ಳುವುದು ಕಷ್ಟ” ಎಂದು ಮಾಜಿ ಎಂಐ ನಾಯಕ ರೋಹಿತ್ ಹೇಳಿದರು.

Advertisement

“ಮುಂಬೈನಲ್ಲಿ, ನಾವು ಯಾವಾಗಲೂ ಪ್ರಮುಖ ಆಟಗಾರರ ಗುಂಪನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ಮುಂದುವರಿಯುತ್ತಾ, ನಾವು ಉತ್ತಮ ಹರಾಜನ್ನು ಹೊಂದಬಹುದು ಮತ್ತು ನಮಗೆ ಮ್ಯಾಚ್ ವಿನ್ನರ್ ಆಗಬಹುದಾದ ಆಟಗಾರರ ಗುಂಪನ್ನು ರಚಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ರೋಹಿತ್‌ ಹೇಳಿದರು.

“ನಾನು ಮುಂಬೈ ಇಂಡಿಯನ್ಸ್‌ಗಾಗಿ ತುಂಬಾ ಕ್ರಿಕೆಟ್ ಆಡಿದ್ದೇನೆ. ಇಲ್ಲಿಗೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ನಾವು ಅತ್ಯುತ್ತಮವಾದ ಕ್ರಿಕೆಟ್‌ ಆಡಲಿಲ್ಲ. ಆದರೆ ಅದನ್ನು ಬದಲಾಯಿಸಲು ನಾವು ಸಾಕಷ್ಟು ಪ್ರಯತ್ನ ಪಡುತ್ತೇವೆ” ಎಂದು ರೋಹಿತ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next