Advertisement

ಕೊಹ್ಲಿ, ಶಾಸ್ತ್ರಿ ಬೆಂಬಲ: ರೋಹಿತ್‌

11:48 PM Oct 22, 2019 | Team Udayavani |

ರಾಂಚಿ: ನನ್ನ ಸಾಮರ್ಥ್ಯದ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ರವಿಶಾಸ್ತ್ರಿ ಅವರಿಗಿದ್ದ ನಂಬಿಕೆಯಿಂದ ಟೆಸ್ಟ್‌ನಲ್ಲಿ ಆರಂಭಿಕನ ಸ್ಥಾನ ಪಡೆಯಲು ನೆರ ವಾಯಿತು ಎಂದು ತಿಳಿಸಿದ ರೋಹಿತ್‌ ಶರ್ಮ ಅವರು ಅವರಿಬ್ಬರ ಬೆಂಬಲ, ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

Advertisement

ಆರಂಭಿಕರಾಗಿ ಪದಾರ್ಪಣ ಸರಣಿಯಲ್ಲಿ ರೋಹಿತ್‌ ಅವರು ಚೊಚ್ಚಲ ದ್ವಿಶತಕ, ಅವಳಿ ಶತಕ ಸಹಿತ ಒಟ್ಟು 529 ರನ್‌ ಪೇರಿಸಿದ್ದಾರೆ. ಈ ಅಮೋಘ ನಿರ್ವಹಣೆಗಾಗಿ ಅವರು ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ಈ ಸಾಧನೆಗೆ ಕೋಚ್‌ ಅವರ ಬೆಂಬಲ ಮತ್ತು ನಾಯಕ ನನ್ನ ಮೇಲೆ ಇರಿಸಿದ ನಂಬಿಕೆಯೇ ಮುಖ್ಯ ಕಾರಣ. ಒಂದು ವೇಳೆ ಅವರು ನನಗೆ ಈ ಅವಕಾಶವನ್ನು ನೀಡದೇ ಇದ್ದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತಂಡದ ಆಡಳಿತ, ನಾಯಕ, ಕೋಚ್‌ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇದು ನನ್ನ ಬಾಳ್ವೆಯ ಅವಿಸ್ಮರಣೀಯ ಸರಣಿಯಾಗಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next