Advertisement

ಮುಂಬೈ-ಚೆನ್ನೈಜಂಟಿ ಐಪಿಎಲ್‌ ತಂಡಕ್ಕೆ ಧೋನಿ ನಾಯಕ

12:52 AM May 16, 2020 | Team Udayavani |

ಚೆನ್ನೈ: ರೋಹಿತ್‌ ಶರ್ಮ ಮತ್ತು ಸುರೇಶ್‌ ರೈನಾ ಸೇರಿಕೊಂಡು ಲಾಕ್‌ಡೌನ್‌ ಬಿಡುವಿನಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಜಂಟಿ ತಂಡವೊಂನ್ನು ರಚಿಸಿದ್ದಾರೆ. ಇದಕ್ಕೆ ಮಹೇಂದ್ರ ಸಿಂಗ್‌ ಧೋನಿ ನಾಯಕರಾಗಿದ್ದಾರೆ.

Advertisement

ಈ ತಂಡದಲ್ಲಿ ಕ್ರಿಕೆಟ್‌ ಲೆಜೆಂಡ್ಸ್‌ ಸಚಿನ್‌ ತೆಂಡುಲ್ಕರ್‌, ಮ್ಯಾಥ್ಯೂ ಹೇಡನ್‌, ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌, ಸಮಕಾಲೀನ ಕ್ರಿಕೆಟ್‌ ಹೀರೋಗಳಾದ ರವೀಂದ್ರ ಜಡೇಜ, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬುಮ್ರಾ ಮೊದಲಾದವರಿದ್ದಾರೆ. ಆದರೆ ಸ್ವತಃ ರೋಹಿತ್‌ ಮತ್ತು ರೈನಾ ತಮ್ಮನ್ನು ಈ ತಂಡಕ್ಕೆ ಸೇರಿಸಿಕೊಂಡಿಲ್ಲ.

ಮುಂಬೈ ಮತ್ತು ಚೆನ್ನೈ ಐಪಿಎಲ್‌ ಪಂದ್ಯಾವಳಿಯ ಎರಡು ಯಶಸ್ವಿ ತಂಡಗಳಾಗಿವೆ. ಹೈದರಾಬಾದ್‌ನಲ್ಲಿ ನಡೆದ ಕಳೆದ ವರ್ಷದ ಫೈನಲ್‌ನಲ್ಲಿ ಚೆನ್ನೈ ವಿರುದ್ಧ ಒಂದು ರನ್‌ ರೋಚಕ ಜಯ ಸಾಧಿಸಿದ ಮುಂಬೈ, ರೋಹಿತ್‌ ನಾಯಕತ್ವದಲ್ಲಿ ದಾಖಲೆ 4ನೇ ಸಲ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ಇದರ ನೆನಪಿನ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದೆ.

ಮುಂಬೈ-ಚೆನ್ನೈ ಜಂಟಿ ತಂಡ:
ಸಚಿನ್‌ ತೆಂಡುಲ್ಕರ್‌, ಮ್ಯಾಥ್ಯೂ ಹೇಡನ್‌, ಫಾ ಡು ಪ್ಲೆಸಿಸ್‌, ಅಂಬಾಟಿ ರಾಯುಡು, ಕೈರನ್‌ ಪೊಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಮಹೇಂದ್ರ ಸಿಂಗ್‌ ಧೋನಿ (ನಾಯಕ/ವಿ.ಕೀ.), ಡ್ವೇನ್‌ ಬ್ರಾವೊ, ಜಡೇಜ, ಹರ್ಭಜನ್‌ ಸಿಂಗ್‌, ಬುಮ್ರಾ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next