Advertisement

ಕ್ಯಾಪ್ಟನ್‌ ಕಮಾಲ್‌: ಭರ್ಜರಿ ದ್ವಿಶತಕ ಸಿಡಿಸಿದ ರೋಹಿತ್‌ ಶರ್ಮಾ 

03:17 PM Dec 13, 2017 | Team Udayavani |

ಮೊಹಾಲಿ : ಇಲ್ಲಿ ಬುಧವಾರ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಭರ್ಜರಿ  ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದು ದ್ವಿಶತಕ ಸಿಡಿಸಿ (208) ಅಜೇಯರಾಗಿ ಉಳಿದಿದ್ದಾರೆ.

Advertisement

ಇದು ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ ಮೂರನೇ ದ್ವಿಶತಕದ ದಾಖಲೆಯಾಗಿದೆ. 2014 ರಲ್ಲಿ ಕೋಲ್ಕತಾದಲ್ಲಿ ಶ್ರೀಲಂಕಾ ವಿರುದ್ಧವೇ 264 ರನ್‌ ಸಿಡಿಸಿದ್ದರು. 2013 ರಲ್ಲಿ ಬೆಂಗಳೂರಿನಲ್ಲಿ ಆಸೀಸ್‌ ವಿರುದ್ಧ 209 ಸಿಡಿಸಿದ್ದರು. 

ಆರಂಭದಲ್ಲಿ ತಾಳ್ಮೆಯ ಆಟವಾಡಿದ ರೋಹಿತ್‌ 117 ಎಸೆತಗಳನ್ನು ಬಳಸಿಕೊಂಡು ಶತಕ ಪೂರೈಸಿದರು. ಶತಕದ ಬಳಿಕ ಸಿಡಿದೆದ್ದ ರೋಹಿತ್‌ ಬೌಂಡರಿ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. ಕೇವಲ  36 ಎಸೆತಗಳಲ್ಲಿ  ಇನ್ನೂ ನೂರು ರನ್‌ ಪೂರೈಸಿ ಸಂಭ್ರಮಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಸಿಕ್ಸರ್‌ಗಳು ಮತ್ತು 13 ಬೌಂಡರಿಗಳಿದ್ದವು. 

ಧರ್ಮಶಾಲಾ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ತಂಡ ಪುಟಿದೆದ್ದು ಬಂದಿರುವುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ. 

ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ  392 ರನ್‌ ಗಳಿಸಿ ಶ್ರೀಲಂಕಾ ತಂಡಕ್ಕೆ 393 ರನ್‌ಗಳಭಾರೀ ಸವಾಲು ಮುಂದಿಟ್ಟಿದೆ. 

Advertisement

ತಂಡದ ಪರ ರೋಹಿತ್‌ಗೆ ಭರ್ಜರಿ ಸಾಥ್‌ ನೀಡಿದ ಶಿಖರ್‌ ಧವನ್‌ 68, ಶ್ರೇಯಸ್‌ ಅಯ್ಯರ್‌ 88 ರನ್‌ಗಳಿಸಿ ಫಾರ್ಮ್ ಪ್ರದರ್ಶಿಸಿದರು. ಧೋನಿ 7 ರನ್‌ಗಳಿಸಿ ಔಟಾದರೆ, ಹಾರ್ದಿಕ್‌ ಪಾಂಡ್ಯಾ 8 ರನ್‌ಗಳಿಸಿ ಔಟಾದರು. 

Advertisement

Udayavani is now on Telegram. Click here to join our channel and stay updated with the latest news.

Next