Advertisement

ಟಿ20 ಗೆದ್ದ ಭಾರತಕ್ಕೆ ಬಿಗ್ ಶಾಕ್: ಏಕದಿನ- ಟೆಸ್ಟ್ ನಿಂದ ರೋಹಿತ್ ಔಟ್

09:58 AM Feb 04, 2020 | keerthan |

ಮುಂಬೈ: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯನ್ನು ಭರ್ಜರಿಯಾಗಿ ಗೆದ್ದುಕೊಂಡಿರುವ ಸಂತಸದಲ್ಲಿರುವ ಟೀಂ ಇಂಡಿಯಾಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಭಾರತದ ಇನ್ ಫಾರ್ಮ್ ಆಟಗಾರ ರೋಹಿತ್ ಶರ್ಮಾ ಮುಂದಿನ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ಧಾರೆ.

Advertisement

ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಸುದ್ದಿ ಮಾಡಿದ್ದು, ರೋಹಿತ್ ಶರ್ಮಾ ತಂಡದಿಂದ ಹೊರಬಿದ್ದಿರುವ ಬಗ್ಗೆ ಬಿಸಿಸಿಐ ಮೂಲಗಳು ತಿಳಿಸಿವೆ ಎಂದಿದೆ.

ಮೌಂಟ್ ಮೌಂಗನಿಯಲ್ಲಿ ನಡೆದ ಅಂತಿಮ ಟಿ20 ಪಂದ್ಯದ ವೇಳೆ ರೋಹಿತ್ ಶರ್ಮಾ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.  60 ರನ್ ಗಳಿಸಿದ್ದ ರೋಹಿತ್ ಶರ್ಮಾ ನೋವಿನಿಂದ ಮೈದಾನ ತೊರೆದಿದ್ದರು. ನಂತರ ಫೀಲ್ಡಿಂಗ್ ವೇಳೆ ರೋಹಿತ್ ಮೈದಾನಕ್ಕೆ ಇಳಿಯದ ಕಾರಣ ಕೆ ಎಲ್ ರಾಹುಲ್ ನಾಯಕತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next