Advertisement
ಭಾರತದಲ್ಲಿ ಇಷ್ಟೆಲ್ಲಾ ಯುವ ಪ್ರತಿಭೆಗಳಿದ್ದರೂ ಇನ್ನೂ ಹಿರಿಯರ ಅವಲಂಬನೆ ಯಾಕೆ? ಟಿ20ಯಲ್ಲಿ ಏಕದಿನ ಕ್ರಿಕೆಟ್ ನಂತೆ ಆಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಮುಂದಿನ ಟಿ20 ವಿಶ್ವಕಪ್ ಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗ ಹಲವು ಪ್ರಯೋಗಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ.
Related Articles
Advertisement
ಪ್ರಸ್ತುತ, ರೋಹಿತ್ ಶರ್ಮಾ ಎಲ್ಲಾ ಫಾರ್ಮಾಟ್ ಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ, ಆದರೆ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ನ ನಡೆಯುತ್ತಿರುವ ಟಿ20 ಕ್ರಿಕೆಟ್ ಪ್ರವಾಸಕ್ಕೆ ತಂಡದ ನಾಯಕರಾಗಿದ್ದಾರೆ. ಮುಂದಿನ ಟಿ20 ತಂಡದ ನಾಯಕತ್ವ ಪಾಂಡ್ಯ ಪಾಲಾಗುವ ಸಾಧ್ಯತೆ ಹೆಚ್ಚಿದೆ.
35 ವರ್ಷ ವಯಸ್ಸಿನ ರೋಹಿತ್ ಶರ್ಮಾ ಮುಂದಿನ ವರ್ಷ ತವರು ನೆಲದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ಅವರನ್ನು ನಾಯಕನಾಗಿ ಇರಿಸಿಕೊಳ್ಳಲು ಮಂಡಳಿಯು ಬಯಸಬಹುದು. ಆದರೆ 2024 ರಲ್ಲಿ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಪಾಂಡ್ಯ ಅವರನ್ನು ಬೆಂಬಲಿಸಲಾಗುತ್ತಿದೆ. ಇತ್ತೀಚಿನ ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಹೆಚ್ಚಿನ ಹಿರಿಯ ಆಟಗಾರರು ಮುಂದಿನ ಆವೃತ್ತಿಗೆ ತಂಡದಲ್ಲಿ ಇರುವ ಸಾಧ್ಯತೆಯಿಲ್ಲ.
ಮತ್ತೊಂದೆಡೆ ಕೋಚ್ ರಾಹುಲ್ ದ್ರಾವಿಡ್ ಅವರ ಕೆಲಸಕ್ಕೂ ಕುತ್ತು ಬಂದಿದೆ ಎನ್ನಲಾಗಿದೆ.