Advertisement

Team India; ದುಲೀಪ್‌ ಟ್ರೋಫಿಗೆ ಯಾಕಿಲ್ಲ ವಿರಾಟ್‌, ರೋಹಿತ್:‌ ಉತ್ತರ ನೀಡಿದ ಜಯ್‌ ಶಾ

12:42 PM Aug 16, 2024 | Team Udayavani |

ಮುಂಬೈ: ಶ್ರೀಲಂಕಾ ಸರಣಿ ಮುಗಿಸಿದ ಭಾರತ ತಂಡದ ಮುಂದಿನ ಸರಣಿ ಇರುವುದು ಸಪ್ಟೆಂಬರ್‌ ಮಧ್ಯದಲ್ಲಿ. ಅಪರೂಪದಲ್ಲಿ ಸಿಕ್ಕ ಒಂದು ತಿಂಗಳ ಬಿಡುವಿನ ವೇಳೆಯನ್ನು ಸರಿಯಾಗಿ ಉಪಯೋಗಿಸಲು ಬಿಸಿಸಿಐ (BCCI) ಮುಂದಾಗಿದೆ. ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರನ್ನು ದುಲೀಪ್‌ ಟ್ರೋಫಿಯಲ್ಲಿ (Duleep Trophy) ಆಡಿಸಲು ಮುಂದಾಗಿದೆ. ಈಗಾಗಲೇ ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ.

Advertisement

ಆದರೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಮತ್ತು ವಿರಾಟ್‌ ಕೊಹ್ಲಿ (Virat Kohli) ಅವರು ದುಲೀಪ್‌ ಟ್ರೋಫಿಯಲ್ಲಿ ಆಡುತ್ತಿಲ್ಲ. ಈ ಮೊದಲು ಇಬ್ಬರೂ ಆಟಗಾರರು ದಶಕಗಳ ಬಳಿಕ ದೇಶೀಯ ಕ್ರಿಕೆಟ್‌ ಆಡಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮ ತಂಡಗಳು ಪ್ರಕಟವಾದಾಗ ಅವರ ಹೆಸರಿಲ್ಲ. ಇದೀಗ ಈ ವಿಚಾರಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸ್ಪಷ್ಟನೆ ನೀಡಿದ್ದಾರೆ.

ಬಿಸಿಸಿಐ ಭಾರತೀಯ ಆಟಗಾರರು ಮತ್ತು ನಿಯಮಿತ ಆಟಗಾರರನ್ನು ದೇಶೀಯ ಕ್ರಿಕೆಟ್‌ ನಲ್ಲಿ ಹೆಚ್ಚು ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದರೂ, ಇಬ್ಬರು ಕ್ರಿಕೆಟ್ ದಿಗ್ಗಜರು ಗಾಯಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲು ಪಂದ್ಯಾವಳಿಯಲ್ಲಿ ಆಡಲು ಒತ್ತಾಯಿಸಬಾರದು ಎಂದು ಶಾ ಹೇಳಿದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಲ್ಲಿ ಪ್ರತಿಯೊಬ್ಬ ಅಂತಾರಾಷ್ಟ್ರೀಯ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಎಂಬುದನ್ನು ಅವರು ಇದೇ ವೇಳೆ ಉಚ್ಚರಿಸಿದರು.

“ರೋಹಿತ್ ಮತ್ತು ವಿರಾಟ್ ಅವರಂತಹ ಆಟಗಾರರನ್ನು ದುಲೀಪ್ ಟ್ರೋಫಿಯಲ್ಲಿ ಆಡುವಂತೆ ನಾವು ಒತ್ತಾಯಿಸಬಾರದು. ಅವರು ಗಾಯದ ಅಪಾಯವನ್ನು ಎದುರಿಸುತ್ತಾರೆ. ನೀವು ಗಮನಿಸಿದರೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಲ್ಲಿ, ಪ್ರತಿಯೊಬ್ಬ ಅಂತಾರಾಷ್ಟ್ರೀಯ ಆಟಗಾರರು ದೇಶೀಯ ಕ್ರಿಕೆಟ್‌ ನಲ್ಲಿ ಆಡುವುದಿಲ್ಲ. ನಾವು ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳಬೇಕು” ಎಂದು ಶಾ ಹೇಳಿದರು.

ದೇಶೀಯ ಕ್ರಿಕೆಟ್ ನಲ್ಲಿ ರೋಹಿತ್ ಕೊನೆಯ ಬಾರಿಗೆ 2016 ರಲ್ಲಿ ಕಾಣಿಸಿಕೊಂಡರೆ, ವಿರಾಟ್‌ ಅವರು 2010 ರಲ್ಲಿ ಆಡಿದ್ದರು. ಆಗ ಅವರಿನ್ನೂ ಭಾರತ ಟೆಸ್ಟ್‌ ತಂಡದ ಭಾಗವಾಗಿರಲಿಲ್ಲ.

Advertisement

ಈ ಬಾರಿಯ ದುಲೀಪ್‌ ಟ್ರೋಫಿ ಪಂದ್ಯಾವಳಿಯು ಆಂಧ್ರಪ್ರದೇಶದ ಅನಂತಪುರ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next