ಅಬುಧಾಬಿ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ಮೊದಲ ಜಯ ಸಾಧಿಸಿದೆ. ಅಫ್ಘಾನ್ ವಿರುದ್ಧ ನಡೆದ ಬುಧವಾರದ ಪಂದ್ಯದಲ್ಲಿ ಭಾರತ ತಂಡ 66 ರನ್ ಅಂತರದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡಕ್ಕೆ ಆರಂಭಿಕರಾದ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಭದ್ರ ಬುನಾದಿ ಹಾಕಿದರು. ಮೊದಲ ವಿಕೆಟ್ ಗೆ ಇವರಿಬ್ಬರು 140 ರನ್ ಪೇರಿಸಿದರು. ರೋಹಿತ್ ಶರ್ಮಾ 74 ರನ್ ಗಳಿಸಿದರೆ, ರಾಹುಲ್ 69 ರನ್ ಗಳಿಸಿದರು.
ಇದನ್ನೂ ಓದಿ:ಇಂದಿನಿಂದ ಸೈಯದ್ ಮುಷ್ತಾಖ್ ಟಿ20 ಆರಂಭ
ರೋಹಿತ್-ರಾಹುಲ್ ಈ ಜೊತೆಯಾಟದಿಂದ 14 ವರ್ಷಗಳ ದಾಖಲೆಯೊಂದು ಮುರಿಯಿತು. 2007ರ ಟಿ20 ವಿಶ್ವಕಪ್ ನಲ್ಲಿ ಗೌತಮ್ ಗಂಭೀರ್ ಮತ್ತು ವೀರೆಂದ್ರ ಸೆಹವಾಗ್ ಅವರು ಇಂಗ್ಲೆಂಡ್ ವಿರುದ್ಧ ಮೊದಲ ವಿಕೆಟ್ ಗೆ 136 ರನ್ ಜೊತೆಯಾಟ ನಡೆಸಿದ್ದರು. ಈ ದಾಖಲೆ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ರಾಹುಲ್-ರೋಹಿತ್ ಅವರಿಂದ ಮುರಿಯಲ್ಪಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದರೆ, ಅಫ್ಘಾನಿಸ್ಥಾನ ಏಳು ವಿಕೆಟ್ ಕಳೆದುಕೊಂಡು 144 ರನ್ ಮಾತ್ರ ಗಳಿಸಿತು.