ಮುಂಬೈ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 21 ದಿನಗಳ ಲಾಕ್ ಡೌನ್ ಹೇರಲಾಗಿದೆ.
ದೇಶದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಸರಕಾರ ಬಹಳಷ್ಟು ಕ್ರಮಕೈಗೊಂಡಿದೆ. ಸಾಕಷ್ಟು ಗಣ್ಯ ವ್ಯಕ್ತಿಗಳು ಸರಕಾರದ ಪರಿಹಾರ ನಿಧಿಗೆ ಸಹಕಾರ ನೀಡಿದ್ದು, ಸದ್ಯ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 80 ಲಕ್ಷ ರೂ ದೇಣಿಗೆ ನೀಡಿದ್ಧಾರೆ.
ಟೀಂ ಇಂಡಿಯಾ ನಿಗದಿತ ಓವರ್ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 45 ಲಕ್ಷ ರೂ., ಮಹರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ., ಫೀಡಿಂಗ್ ಇಂಡಿಯಾ ಸಂಸ್ಥೆ ಮತ್ತು ಬೀದಿನಾಯಿಗಳ ಕಲ್ಯಾಣ ನಿಧಿಗೆ ತಲಾ ಐದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಖ್ಯಾತ ಕ್ರಿಕೆಟರ್ ಗಳಾದ ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಗೌತಮ್ ಗಂಭೀರ್, ಅಜಿಂಕ್ಯ ರಹಾನೆ ಕೋವಿಡ್-19 ವಿರುದ್ಧ ಹೋರಾಟಕ್ಕೆ ಧನಸಹಾಯ ಮಾಡಿದ್ದರು.