Advertisement
ಇಂದಿನ ಪಂದ್ಯದಲ್ಲಿ 50 ರನ್ ಗಳಿಸಿ ತಂಡದ ಜಯಕ್ಕೆ ಕಾರಣರಾದ ರೋಹಿತ್ ಈ ವೇಳೆ ಕಿವೀಸ್ ನ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಅಳಿಸಿ ಹಾಕಿದರು. ಸದ್ಯ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ರೋಹಿತ್ ಗಳಿಸಿರುವ ಒಟ್ಟು ರನ್ 2288. ಮಾರ್ಟಿನ್ ಗಪ್ಟಿಲ್ 2272 ರನ್ ಗಳಿಸಿದರೆ, ಅವರ ಹಿಂದಿರುವ ಶೋಯೆಬ್ ಮಲಿಕ್ 2263 ರನ್ ಬಾರಿಸಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 2167 ರನ್ ಗಳಿಸಿದ್ದಾರೆ.ರೋಹಿತ್ ಶರ್ಮಾ ಒಟ್ಟು 92 ಚುಟುಕು ಪಂದ್ಯವಾಡಿದ್ದು 84 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ. 32.69 ರ ಸರಾಸರಿ ಮತ್ತು 138 ರ ಸ್ಟ್ರೈಕ್ ರೇಟ್ ನಲ್ಲಿ ರೋಹಿತ್ ಈ ಸಾಧನೆ ಮಾಡಿದ್ದಾರೆ.