Advertisement
“ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮ ಮತ್ತು ಸಚಿನ್ ತೆಂಡುಲ್ಕರ್ ಅವರ ಸಂದರ್ಶನ ನಡೆಸಿರುವ ಸ್ಟಾರ್ ಸ್ಪೋರ್ಟ್ಸ್ ಅವರ ಬಳಿ ಕೆಲವು ಅಭಿಪ್ರಾಯಗಳನ್ನು ಕೇಳಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹಿತ್ ನಾನು ಬೌಲಿಂಗ್ ಮಾಡುವುದನ್ನು ಬಹಳ ಮಿಸ್ ಮಾಡಿ ಕೊಳ್ಳುತ್ತಿದ್ದೇನೆ. ನನ್ನ ಕೈಬೆರಳು ಗಾಯಗೊಂಡ ಬಳಿಕ ನಾನು ಬೌಲಿಂಗ್ ನಡೆಸುವುದನ್ನು ಮೊಟಕುಗೊಳಿಸಿದೆ. ಇದೀಗ ಮತ್ತೆ ಬೌಲಿಂಗ್ ಮಾಡಬೇಕೆಂದಿರುವೆ. ಆದರೆ ಅದು ಸೀಮಿತ ಓವರ್‌ಗಳ ಪಂದ್ಯದಲ್ಲಿ ಅಲ್ಲ ಹೊರತಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಕನಿಷ್ಠ 10 ಓವರ್‌ಗಳು ಎಸೆಯಲು ಮಾನಸಿಕವಾಗಿ ಸಜ್ಜಾಗಿದ್ದೇನೆ ಎಂದು ರೋಹಿತ್ ಹೇಳಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಆಟಗಾರರು ತಮ್ಮ ಫಿಟ್‌ನೆಸ್ ಕಾಯ್ದುಕೊಂಡು ಮುಂದಿನ ಪಂದ್ಯಗಳಿಗೆ ಸಜ್ಜಾಗಬೇಕು. ಎಲ್ಲರೂ ತಮ್ಮೊಳಗಿನ ಬ್ಯಾಟರಿಯನ್ನು ರೀಚಾರ್ಜ್ ಮಾಡಿಕೊಳ್ಳುತ್ತಿರಬೇಕು. ನಿರಂತರ ಕ್ರಿಕೆಟ್ ಆಡುತ್ತಿರುವಾಗ ವಿಶ್ರಾಂತಿಯ ಅಗತ್ಯವಿರುತ್ತದೆ. ಇದರಿಂದ ಪ್ರತಿ ಪಂದ್ಯದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳುವುದು ಕಷ್ಟ. ಆದ್ದರಿಂದ ಲಾಕ್‌ಡೌನ್ ದಿನಗಳಲ್ಲಿ ಸಿಕ್ಕ ಸಮಯವನ್ನು ಸರಿಯಾಗಿ ಬಳಸಿಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಆಟಗಾರರು ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ನೀಡಿ ಮುಂದಿನ ದಿನಗಳಿಗೆ ಸಜ್ಜಾಗಬೇಕು ಎಂದು ಸಚಿನ್ ಹೇಳಿದ್ದಾರೆ.