Advertisement

ವಿಶ್ವಕಪ್‌ನ ಯಶಸ್ವಿ ಆರಂಭಿಕರು ರೋಹಿತ್‌-ಧವನ್‌?

03:06 AM May 17, 2019 | Team Udayavani |

ಲಂಡನ್‌: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯ ಯಶಸ್ವಿ ಆರಂಭಿಕ ಜೋಡಿ ಯಾರಾಗಬಹುದು? ಸ್ವತಃ ಐಸಿಸಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಇಂಥದೊಂದು ಸ್ಪರ್ಧೆ ಏರ್ಪಡಿಸಿ ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟಿಸಿದೆ. ಇದಕ್ಕೆ ಅತ್ಯಧಿಕ ಸಂಖ್ಯೆಯ ಅಭಿಮಾನಿಗಳು ಭಾರತದ ರೋಹಿತ್‌ ಶರ್ಮ-ಶಿಖರ್‌ ಧವನ್‌ ಜೋಡಿಯನ್ನು ಹೆಸರಿಸಿದ್ದಾರೆ. ಇದು ಶ್ರೇಷ್ಠ ಆರಂಭಿಕರ ವಿಶ್ವಕಪ್‌ ಆಗಲಿದೆ ಎಂದು ಐಸಿಸಿ ಹೇಳಿದೆ.

Advertisement

ಇಂಗ್ಲೆಂಡಿನ ಜೇಸನ್‌ ರಾಯ್‌-ಜಾನಿ ಬೇರ್‌ಸ್ಟೊ, ಪಾಕಿಸ್ತಾನದ ಫ‌ಖರ್‌ ಜಮಾನ್‌-ಇಮಾಮ್‌ ಉಲ್ ಹಕ್‌, ಆಸ್ಟ್ರೇಲಿಯದ ಏರಾನ್‌ ಫಿಂಚ್-ಡೇವಿಡ್‌ ವಾರ್ನರ್‌ ಇವರಲ್ಲಿ ಪ್ರಮುಖರಾಗಿದ್ದಾರೆ. ಇವರನ್ನೂ ಅನೇಕರು ಸೂಚಿಸಿದ್ದಾರೆ.

ಯಶಸ್ವೀ ಆರಂಭಿಕ ಜೋಡಿ: ರೋಹಿತ್‌ ಶರ್ಮ-ಶಿಖರ್‌ ಧವನ್‌ ಅವರನ್ನು ಏಕದಿನ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಜೋಡಿಗಳಲ್ಲೊಂದು ಎಂದೇ ಬಣ್ಣಿಸಲಾಗುತ್ತಿದೆ. 2011ರಲ್ಲಿ ಒಟ್ಟುಗೂಡಿ ಇನಿಂಗ್ಸ್‌ ಆರಂಭಿಸಲಾರಂಭಿಸಿದ ಇವರು 44.96ರ ಸರಾಸರಿಯಲ್ಲಿ 4,586 ರನ್‌ ಪೇರಿಸಿದ್ದಾರೆ. 15 ಶತಕಗಳ ಜತೆಯಾಟದ ಜತೆಗೆ 13 ಅರ್ಧ ಶತಕಗಳ ಜತೆಯಾಟವನ್ನೂ ದಾಖಲಿಸಿದ್ದಾರೆ. ಐಸಿಸಿ ಕೂಟಗಳಲ್ಲೂ ಈ ಭಾರತೀಯ ಆರಂಭಿಕರ ಸಾಧನೆ ಅಮೋಘ ಮಟ್ಟದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next