Advertisement
“ರೊಹಿಂಗ್ಯಾ ಮುಸ್ಲಿಮರು ಜಮ್ಮು, ನವದೆಹಲಿ, ಹೈದರಾಬಾದ್ ಮತ್ತು ಮೇವಾತ್‌ನಲ್ಲಿನ ಉಗ್ರ ಸಂಘಟನೆ ಗಳೊಂದಿಗೆ ಸಂಪರ್ಕ ಹೊಂದಿರುವುದು ಗುಪ್ತಚರ ಮಾಹಿತಿಯಿಂದ ದೃಢಪಟ್ಟಿದೆ. ಅವರನ್ನು ಭಾರತದಲ್ಲಿ ಇರಲು ಬಿಟ್ಟರೆ ಮುಂದೆ ಐಸಿಸ್ ಉಗ್ರರು ಅವರನ್ನು ನಮ್ಮ ವಿರುದ್ಧವೇ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ,’ ಎಂದು ಕೇಂದ್ರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ವಲಸಿಗರಿಗೆ ಭಾರತದಲ್ಲಿ ನಿಲ್ಲಲು ಅರ್ಹತೆಯೇ ಇಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದೆ. ಅಕ್ರಮ ವಲಸಿಗರನ್ನು ದೇಶದಿಂದ ಹೊರದೂ ಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಇಬ್ಬರು ರೊಹಿಂಗ್ಯಾ ವಲಸಿಗರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆ ಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದ ಬೆನ್ನಲ್ಲೇ ಕೇಂದ್ರ ಪ್ರಮಾಣಪತ್ರ ಸಲ್ಲಿಸಿದೆ. ತನ್ನ ಈ ನಿರ್ಧಾರ “ವಲಸಿಗರ ಮೂಲಭೂತ ಹಕ್ಕುಗಳ ಉಲ್ಲಂಘನೆ ಯಾ ಗುತ್ತದೆ’ ಎಂಬ ಪ್ರಶ್ನೆ ಉದ್ಭವಿಸು ವುದಿಲ್ಲ ಎಂದು ಪ್ರತಿಪಾದಿಸಿದೆ.
Advertisement
ರೊಹಿಂಗ್ಯಾ ವಲಸಿಗರು ಭದ್ರತೆಗೆ ಮಾರಕ
07:10 AM Sep 15, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.