Advertisement

ಲಾಕ್‌ಡೌನ್‌: ಜನರ ನೆರವಿಗೆ ನಿಂತ ರೋಹನ್‌ ಶೆಟ್ಟಿ

07:35 PM Oct 20, 2020 | Suhan S |

ಪುಣೆ, ಅ. 19: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನಗರದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿತ್ತು. ಆ ಹೊತ್ತಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರಿಗೆ ಸಮುದಾಯ ಸಂಘಟನೆ ಗಳು ಒಂದು ಹಂತದಲ್ಲಿ ನೆರವಿಗೆ ಬಂದರೆ, ಇನ್ನು  ಕೆಲವರು ವೈಯಕ್ತಿಕ ನೆಲೆಯಲ್ಲಿ ನೆರವಿಗೆ ನಿಂತು ಮಾನವೀಯತೆ ಮೆರೆದರು. ಅಂಥವರಲ್ಲಿ ಪುಣೆಯ ಯುವ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ ಅವರು ಒಬ್ಬರು. ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ, ತಮ್ಮ ಊರುಗಳಿಗೆ ತೆರಳ ಲಾಗದೇ ತೊಂದರೆಗೀಡಾದವರಿಗೆ, ಕೋವಿಡ್ ಯೋಧರಿಗೆ, ಶುಚಿತ್ವದ ಕರ್ಮ ಚಾರಿಗಳಿಗೆ ನೆರವಿನ ಹಸ್ತ ಚಾಚಿದ್ದಾರೆ.

Advertisement

ರೇಷನ್‌ ಕಿಟ್‌ ವಿತರಣೆ :

ವಿವಿಧ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಇವರು, ಸುಮಾರು 700 ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್‌ಗಳನ್ನು ಪೂರೈಸಿದ್ದಾರೆ. ನಗರದ ವಿವಿಧೆಡೆ ದಿನದ 24 ಗಂಟೆಯೂ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಎಲ್ಲೂ ಊಟ-ಚಹಾ ಸಿಗದ ಹೊತ್ತಿನಲ್ಲಿ ಅವೆಲ್ಲವನ್ನೂ ಒದಗಿಸು ತ್ತಿದ್ದರು ರೋಹನ್‌.

ಪೊಲೀಸರಿಗೆ ಮಾಸ್ಕ್ ವಿತರಣೆ :

ವಿವಿಧ ಪೊಲೀಸ್‌ ಠಾಣೆಗಳ ಪೊಲೀಸರಿಗೆ 300ಕ್ಕೂ ಹೆಚ್ಚು ಮಾಸ್ಕ್, ಮಾಸ್ಕ್ ಶೀಲ್ಡ್‌ಗಳನ್ನು ಹಂಚಲಾಗಿದೆ. ಪೊಲೀಸರು ಅಲ್ಲಲ್ಲಿ ಟೆಂಟ್‌ ಹಾಕಿ ಕಾರ್ಯ ನಿರ್ವಹಿಸಲು ಸುಮಾರು 40 ಟೇಬಲ್‌ ಹಾಗೂ ಕುರ್ಚಿಗಳನ್ನು ಒದಗಿಸಲಾಗಿದೆ. ಬಿಬ್ವೆವಾಡಿಯಲ್ಲಿರುವ ಆರ್ಧಾ ಮುಖ ಬಾಧಿರ್‌ ಶಾಲೆಯನ್ನು ಸಂಪೂರ್ಣ ಸ್ಯಾನಿ ಟೇಶನ್‌ ಮಾಡಿಸಲಾಗಿದೆ. ಯುವ ವಿಭಾಗದ ಸದಸ್ಯರ ಅವರ ಒಂದು ಘಟಕವು ಪೊಲೀಸರ ಸೇವೆಯಲ್ಲೇ  ತೊಡಗಿದ್ದು ವಿಶೇಷ.

Advertisement

ಲಯನ್ಸ್‌  ಕ್ಲಬ್‌ ಸಹಯೋಗ :  ಲಯನ್ಸ್‌ ಕ್ಲಬ್‌ ಪುಣೆ ಸಹಯೋಗದಲ್ಲಿ ಜನರ ಆರೋಗ್ಯ ಸುಧಾರಣೆಗಾಗಿ ಹೋಮಿಯೋಪತಿಕ್‌ ಔಷಧಗಳನ್ನು ವಿತರಿಸಲಾಯಿತು. ವಿವಿಧ ಶಾಲೆ ಗಳಿಗೆ ಸ್ಯಾನಿಟೈಸೇಶನ್‌ ಮೆಷಿನ್‌ಗಳನ್ನೂ ವಿತರಿಸಲಾಯಿತು.

2017ರಿಂದ ಪುಣೆ ತುಳುಕೂಟದ ಯುವ :

ವಿಭಾಗದ ಕಾರ್ಯಾಧ್ಯಕ್ಷರಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು, ಚಿತ್ರಕಲಾ ಸ್ಪರ್ಧೆ, ಜನಜಾಗೃತಿಗಾಗಿ ಸೈಕಲ್‌ ರ್ಯಾಲಿ, ರಸ್ತೆ ಸುರಕ್ಷಾ ಜಾಗೃತಿ- ಹತ್ತಾರು ವಿಶಿಷ್ಟವಾದ ಕಾರ್ಯಕ್ರಮ ಸಂಘಟಿಸಿದ್ದಾರೆ. ಕಳೆದ ಮಹಾನಗರಪಾಲಿಕೆ ಚುನಾವಣೆ ಯಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೋಹನ್‌,  ಇಲ್ಲಿಯ ನಿವೃತ್ತ ಬ್ಯಾಂಕ್‌ ಉದ್ಯೋಗಿ ಪುರುಷೋತ್ತಮ  ಶೆಟ್ಟಿ ಮತ್ತು ಸಮಾಜ ಸೇವಕಿ ಪ್ರೇಮಾ ಶೆಟ್ಟಿ  ದಂಪತಿಯ ಪುತ್ರ.

ಕೋವಿಡ್ ಜಾಗೃತಿ :

ಕೋವಿಡ್ ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯನ್ನು ಮೂಡಿಸಿದ್ದು ಇವರ ನೇತೃತ್ವದ ತಂಡದ ಮತ್ತೂಂದು ಒಳ್ಳೆಯ ಕೆಲಸ. ಕೊಳಗೇರಿ ನಿವಾಸಿಗಳಿಗೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಇನ್ನಿತರ ಕೋವಿಡ್‌ ಮಾರ್ಗಸೂಚಿಗಳನ್ನು ಮನವರಿಕೆ ಮಾಡಲಾಯಿತು. ಶುಚಿತ್ವ ಮಾರ್ಗದರ್ಶನ ಶಿಬಿರ, ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಯಿತು. ಹಲವಾರು ಜನರಿಗೆ ತಮ್ಮ ಊರುಗಳಿಗೆ ತೆರಳಲು ಅಗತ್ಯ ಪರವಾನಿಗೆ ಗಳನ್ನು ಒದಗಿಸಲಾಯಿತು. ಪಿಂಪ್ರಿ-ಚಿಂಚಾÌಡ್‌ನ‌ ಭೋಸ್ರಿ ಪ್ರದೇಶದಲ್ಲಿ ಸುಮಾರು 300 ಜನರಿಗೆ ಆಹಾರಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next