Advertisement

ಬೋಪಣ್ಣ-ವೆಸಲಿನ್‌ ನಿರ್ಗಮನ

06:00 AM Jun 07, 2018 | |

ಪ್ಯಾರಿಸ್‌: ಭಾರತದ ರೋಹನ್‌ ಬೋಪಣ್ಣ-ಫ್ರಾನ್ಸ್‌ನ ಎಡ್ವರ್ಡೊ ರೋಜರ್‌ ವೆಸಲಿನ್‌ ಜೋಡಿ ಫ್ರೆಂಚ್‌ ಓಪನ್‌ ಪುರುಷರ ಡಬಲ್ಸ್‌ ಸ್ಪರ್ಧೆಯಿಂದ ಹೊರಬಿದ್ದಿದೆ. 

Advertisement

ಮಂಗಳವಾರ ರಾತ್ರಿಯ ಸೆಣಸಾಟದಲ್ಲಿ 13ನೇ ಶ್ರೇಯಾಂಕದ ಈ ಇಂಡೋ-ಫ್ರೆಂಚ್‌ ಜೋಡಿಯನ್ನು ನಿಕೋಲಸ್‌ ಮೆಕ್ಟಿಕ್‌ (ಕ್ರೊವೇಶಿಯಾ)-ಅಲೆಕ್ಸಾಂಡರ್‌ ಪೆಯ (ಆಸ್ಟ್ರಿಯಾ) ಸೇರಿಕೊಂಡು 7-6, 6-2 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು. ಒಂದು ಗಂಟೆ, 32 ನಿಮಿಷಗಳ ತನಕ ಇವರ ಹೋರಾಟ ಸಾಗಿತು.

ಇದು ಈ ವರ್ಷದ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಬೋಪಣ್ಣ-ವೆಸಲಿನ್‌ ಜೋಡಿಗೆ ಎದುರಾದ 2ನೇ ದೊಡ್ಡ ಆಘಾತ. ಇದಕ್ಕೂ ಮುನ್ನ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಇವರು ದ್ವಿತೀಯ ಸುತ್ತಿನಲ್ಲೇ ಪರಾಭವಗೊಂಡಿದ್ದರು.

ವಿಜೇತ ಮೆಕ್ಟಿಕ್‌-ಪೆಯ ಅವರಿನ್ನು ಇವರಿನ್ನು ಫ್ರಾನ್ಸ್‌ನ ಪೀಯರೆ ಹ್ಯೂಸ್‌-ನಿಕೋಲಸ್‌ ಮಹುತ್‌ ಹಾಗೂ ನಿಕೋಲಸ್‌ ಜರ್ರಿ (ಚಿಲಿ)-ಮ್ಯಾಕ್ಸಿಮೊ ಗೊಂಜಾಲೆಸ್‌ (ಆರ್ಜೆಂಟೀನಾ) ನಡುವಿನ ವಿಜೇತ ಜೋಡಿಯನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next