ಬರ್ನ್ (ಸ್ವಿಜರ್‌ಲ್ಯಾಂಡ್): ಖ್ಯಾತ ಟೆನಿಸಿಗ ರೋಜರ್ ಫೆಡರರ್ ವರ್ಷಾರಂಭದ ಆಸ್ಟ್ರೇ ಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಿಂದ ದೂರ ಸರಿಯುವ ಯೋಜನೆಯಲ್ಲಿದ್ದಾರೆ.
ಈ ವರ್ಷದ ಜನವರಿಯಲ್ಲಿ “ಮೆಲ್ಬರ್ನ್ ಪಾರ್ಕ್’ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ ಅವರಿಗೆ ಸೋತ ಬಳಿಕ ಫೆಡರರ್ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರವೇ ಉಳಿದಿದ್ದಾರೆ. ಎಡ ಗಾಲಿನ ಮಂಡಿಗೆ ಎರಡು ಸಲ ಶಸ್ತ್ರಚಿಕಿತ್ಸೆಗೊಳಗಾದದ್ದೇ ಇದಕ್ಕೆ ಕಾರಣ.
“ಅಕ್ಟೋಬರ್ ವೇಳೆ ಶೇ. ನೂರ ರಷ್ಟು ಫಿಟ್‌ನೆಸ್‌ನೊಂದಿಗೆ ಅಭ್ಯಾಸ ನಡೆಸುವ ವಿಶ್ವಾಸ ಹೊಂದಿದ್ದೆ. ಆದರೆ ಈಗಲೂ ನಾನು ಸಂಪೂರ್ಣ ಫಿಟ್‌ನೆಸ್‌ಗೆ ಮರಳಿಲ್ಲ. ಹೀಗಾಗಿ ಆಸ್ಟ್ರೇಲಿಯ ಓಪನ್‌ನಲ್ಲಿ ಆಡುವ ಸಾಧ್ಯತೆ ಕಾಣಿಸುತ್ತಿಲ್ಲ’ ಎಂದು ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಸಮಾರಂಭವೊಂದರ ವೇಳೆ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದರು.
ಎರಡನೇ ಸಲ ಮಾಡಿಕೊಂಡ ಮಂಡಿ ಶಸ್ತ್ರ ಚಿಕಿತ್ಸೆ ನನ್ನ ಉತ್ಸಾಹವನ್ನು ದೊಡ್ಡ ಮಟ್ಟದಲ್ಲೇ ಕುಗ್ಗಿಸಿದೆ. ಮುಂದಿನ ಎರಡು ತಿಂಗಳಲ್ಲಿ ಕಾಲಿನ ಸ್ಥಿತಿ ಹೇಗಿದ್ದೀತು ಎಂಬು ದರ ಮೇಲೆ ಭವಿಷ್ಯದ ಬಗ್ಗೆ ಆಲೋಚಿಸಬೇಕಾಗುತ್ತದೆ.
-ರೋಜರ್ ಫೆಡರರ್