ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ. 3ನೇ ಸುತ್ತಿನ ಮ್ಯಾರಥಾನ್ ಹೋರಾಟದ ಬಳಿಕ ಫೆಡರರ್ ಈ ನಿರ್ಧಾರಕ್ಕೆ ಬಂದಿದ್ದಾರೆ.
“ಎರಡು ಶಸ್ತ್ರಚಿಕಿತ್ಸೆ ಕಂಡ ಬಲ ಮೊಣಕಾಲಿನ ಮೇಲೆ ವಿಪರೀತ ಒತ್ತಡ ಬೀಳುತ್ತಿದೆ. ದೇಹ ಸ್ಪಂದಿಸುತ್ತಿಲ್ಲ. ಇಂಥದೊಂದು ನಿರ್ಧಾರ ಅನಿವಾರ್ಯ’ ಎಂದು 40 ವರ್ಷದ ಗಡಿಯಲ್ಲಿರುವ ಫೆಡರರ್ ಹೇಳಿದರು. ಸೋಮವಾರ ಅವರು ಇಟಲಿಯ ಮ್ಯಾಟಿಯೊ ಬರೆಟಿನಿ ವಿರುದ್ಧ ಆಡಬೇಕಿತ್ತು.
ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧದ 4 ಸೆಟ್‌ಗಳ ಥ್ರಿಲ್ಲರ್‌ನಲ್ಲಿ ಫೆಡರರ್ 7-6 (5), 6-7 (3), 7-6 (4), 7-5 ಅಂತರದ ಜಯ ಸಾಧಿಸಿದ್ದರು. ಇದು 3 ಗಂಟೆ, 35 ನಿಮಿಷಗಳ ಕಾದಾಟವಾಗಿತ್ತು.
ನಡಾಲ್, ಸ್ವಿಯಾಟೆಕ್: 4ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ಸ್
ಹಾಲಿ ಚಾಂಪಿಯನ್‌ಗಳಾದ ರಫೆಲ್ ನಡಾಲ್ ಮತ್ತು ಐಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಪಂದ್ಯಾವಳಿಯ 4ನೇ ಸುತ್ತಿಗೆ ಮುನ್ನಡೆದಿದ್ದಾರೆ. ರಫೆಲ್ ನಡಾಲ್ 6-3, 6-3, 6-3 ಅಂತರದಿಂದ ಬ್ರಿಟನ್ನಿನ ಕ್ಯಾಮರಾನ್ ನೂರಿ ಅವರನ್ನು ಮಣಿಸಿದರು. ಇದರೊಂದಿಗೆ ರೊಲ್ಯಾಂಡ್ ಗ್ಯಾರಸ್‌ನಲ್ಲಿ ನಡಾಲ್ ಸತತ 30 ಸೆಟ್‌ಗಳನ್ನು ಗೆದ್ದಂತಾಯಿತು. ಇವರ ಮುಂದಿನ ಎದುರಾಳಿ ಇಟಲಿಯ ಜಾನಿಕ್ ಸಿನ್ನರ್. ಇನ್ನೊಂದು ಪಂದ್ಯದಲ್ಲಿ ಅವರು ಸ್ವೀಡನ್‌ನ ಮೈಕಲ್ ವೈಮರ್ ವಿರುದ್ಧ 6-0, 2-6, 6-4, 6-3 ಗೆಲುವು ಕಂಡರು.
ವನಿತಾ ಚಾಂಪಿಯನ್ ಐಗಾ ಸ್ವಿಯಾಟೆಕ್ 7-6 (7-4), 6-0 ಅಂತರದಿಂದ ಎಸ್ತೋನಿಯಾದ ಅನ್ನಾ ಕೊಂಟಾವೀಟ್ ಅವರಿಗೆ ಸೋಲುಣಿಸಿದರು. ಸ್ವಿಯಾಟೆಕ್ ಎದುರಾಳಿ ಮಾರ್ತಾ ಕಾಸ್ಟ್‌ಯುಕ್