Advertisement

ಫೆಡರರ್‌ ವಿಶ್ವದ ಬಹು ಬೇಡಿಕೆಯ ಅಥ್ಲೀಟ್‌

03:45 AM Jan 14, 2017 | Team Udayavani |

ನವದೆಹಲಿ: ಮಾಜಿ ವಿಶ್ವ ನಂ.1, ಸ್ವಿಜರ್ಲೆಂಡ್‌ನ‌ ಸ್ಟಾರ್‌ ಟೆನಿಸ್‌ ಆಟಗಾರ ರೋಜರ್‌ ಫೆಡರರ್‌ ವಿಶ್ವ ಮಟ್ಟದಲ್ಲಿ ವರ್ಷದ ಬಹುಬೇಡಿಕೆಯ ಅಥ್ಲೀಟ್‌ ಆಗಿ ಹೊರಹೊಮ್ಮಿದ್ದಾರೆ. ಅಥ್ಲೀಟ್‌ಗಳ ಬೇಡಿಕೆಯನ್ನು ಪರಿಗಣಿಸಿ ಅಧ್ಯಯನ ನಡೆಸಿದ “ಲಂಡನ್‌ ಸ್ಕೂಲ್‌ ಅಫ್ ಮಾರ್ಕೆಟಿಂಗ್‌’ ಟಾಪ್‌ 10 ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

2016 ಅವಧಿಯಲ್ಲಿ ಪ್ರಸ್ತುತ ವಿಶ್ವ ನಂ.17ರಲ್ಲಿರುವ ಫೆಡರರ್‌ ಹೆಚ್ಚಿನ ಆದಾಯ ಗಳಿಕೆಯನ್ನು ಹೊಂದಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಫೆಡರರ್‌ ಪ್ರಸ್ತುತ ಉತ್ತಮ ಪ್ರದರ್ಶನ ನೀಡದಿದ್ದರೂ ವಿಶ್ವದ ಬಹುಬೇಡಿಕೆಯ ಅಥ್ಲೀಟ್‌ಗಳಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. 

ಹಾಗೇ ಸ್ಟಾರ್‌ ಟೆನಿಸ್‌ ಆಟಗಾರ ನೋವಾಕ್‌ ಜೋಕೋವಿಚ್‌ 7ನೇ ಸ್ಥಾನದಲ್ಲಿ, ರಾಫೆಲ್‌ ನಡಾಲ್‌ 10ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಬಾಸ್ಕೆಟ್‌ಬಾಲ್‌ ಆಟಗಾರ ಲೇಬ್ರಾನ್‌ ಜೇಮ್ಸ್‌(2ನೇ ಸ್ಥಾನ), ಗಾಲ್ಫ್ನ ಫಿಲ್‌ ಮಿಕಲ್ಸನ್‌(3ನೇ ಸ್ಥಾನ), ಗಾಲ್ಫ್ನ ಟೈಗರ್‌ ವುಡ್ಸ್‌ (4ನೇ ಸ್ಥಾನ),ಬಾಸ್ಕೆಟ್‌ಬಾಲ್‌ನ ಕೇವಿನ್‌ ಡ್ಯುರಾಂಟ್‌(5ನೇ ಸ್ಥಾನ), ಗಾಲ್ಫ್ನ ರಾಯ್‌ ಮ್ಯಾಕ್ರೊಯ್‌(6ನೇ ಸ್ಥಾನ), ಫ‌ುಟ್‌ಬಾಲ್‌ನ ಕ್ರಿಸ್ಟಿಯಾನೋ ರೋನಾಲ್ಡೊ(8ನೇ ಸ್ಥಾನ), ಗಾಲ್ಫ್ನ ಜೋರ್ಡಾನ್‌ ಫಿಟ್‌(9ನೇ ಸ್ಥಾನ) ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next